ಹೈದರಾಬಾದ್: ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ ಎಂಬ ವಿವಾದಿತ ಮಸೂದೆಯನ್ನು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ವಾಪಸ್ ಪಡೆದಿದೆ.
ಈ ಮೂಲಕ ಆಂಧ್ರಕ್ಕೆ ಅಮರಾವತಿಯೊಂದೇ ರಾಜಧಾನಿಯಾಗಿದೆ. ಆಂಧ್ರಕ್ಕೆ ಮೂರು ರಾಜಧಾನಿ ಮಸೂದೆಯನ್ನು ಹಿಂಪಡೆದು ಹೈಕೋರ್ಟ್ ಗೆ ನಿರ್ಧಾರನ್ನು ತಿಳಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಿಎಂ ಜಗನ್ ಮೋಹನ್ ರೆಡ್ದಿ ಘೋಷಿಸಿದ್ದಾರೆ.
ಆಂಧ್ರಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲಾ ಪ್ರದೇಶಗಳ ಅಂತರ್ಗತ ಅಭಿವೃದ್ಧಿ ಕಾಯ್ದೆ 2020ರ ಪ್ರಕಾರ ಆಂಧ್ರಪ್ರದೇಶ ಸರ್ಕಾರ ಮೂರು ಆಡಳಿತ ಸ್ಥಾನವನ್ನು ಹೊಂದಿರಬೇಕು ಎಂದು ಅಫಿಡವಿಟ್ ಸಲ್ಲಿಸಿತ್ತು.
ಅಮರಾವತಿ ಶಾಸಕರ ರಾಜಧಾನಿ, ವಿಶಾಖಪಟ್ಟಣ ಕಾರ್ಯನಿರ್ವಾಹಕ ರಾಜಧಾನಿ ಹಾಗೂ ಕರ್ನೂಲ್ ನ್ನು ನ್ಯಾಯಾಂಗ ರಾಜಧಾನಿ ಎಂದು ಕರೆಯಲಾಗುವುದು ಎಂದು ಸಿಎಂ ಜಗನ್ ಸರ್ಕಾರ ಘೋಷಿಸಿತ್ತು. ಆದರೀಗ ಮೂರು ರಾಜಧಾನಿ ಮಸೂದೆ ವಾಪಸ್ ಪಡೆಯಲು ನಿರ್ಧರಿಸಿರುವ ಜಗನ್ ಸರ್ಕಾರ, ಆಂಧ್ರಕ್ಕೆ ಅಮರಾವತಿಯೊಂದೇ ರಾಜಧಾನಿ ಎಂದು ಘೋಷಿಸಿದೆ.