
ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಅಚ್ಯುತಪುರಂ ವಿಶೇಷ ಆರ್ಥಿಕ ವಲಯದಲ್ಲಿರುವ ಎಸ್ಸೆಂಟಿಯಾ ಕಂಪನಿಯ ಘಟಕದಲ್ಲಿ ಔಷಧೀಯ ಘಟಕದಲ್ಲಿ ರಿಯಾಕ್ಟರ್ ಸ್ಫೋಟಗೊಂಡ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಪ್ಲಾಂಟ್ ಎಜಿಎಂ ಸನ್ಯಾಸಿ ನಾಯ್ಡು, ಲ್ಯಾಬ್ ಹೆಡ್ ರಾಮಿರೆಡ್ಡಿ, ಕೆಮಿಸ್ಟ್ ಹಾರಿಕಾ, ಪ್ರೊಡಕ್ಷನ್ ಆಪರೇಟರ್ ಪಾರ್ಥಸಾರಥಿ, ಸಹಾಯಕ ಚಿನ್ನಾರಾವ್, ಆಪರೇಟರ್ ಮೋಹನ್, ಗಣೇಶ್, ಪ್ರಶಾಂತ್, ನಾರಾಯಣ್, ರಾಜಶೇಖರ್ ಸೇರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 15 ಜನ ದುರಂತ ಸಾವು ಕಂಡಿದ್ದಾರೆ.
30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಗಾಯಾಳುಗಳನ್ನು ಎನ್‌ಟಿಆರ್ ಆಸ್ಪತ್ರೆ ಮತ್ತು ಇತರ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವಶೇಷಗಳಾಡಿ ಮತ್ತಷ್ಟು ಶವಗಳು ಇರುವ ಶಂಕೆ ವ್ಯಕ್ತವಾಗಿದ್ದು, ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್. ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.