ಶುಕ್ರವಾರದಂದು, ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಪೋಲವರಂ ಯೋಜನೆಗೆ ಭೇಟಿ ನೀಡಿದ್ರು. ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಪೆರ್ಣಿ ವೆಂಕಟರಾಮಯ್ಯ ತಮ್ಮ ಸಂಯಮ ಕಳೆದು ಕೊಂಡು, ಪೊಲೀಸ್ ಅಧಿಕಾರಿಗೆ ನಿಂದಿಸಿರುವ ಘಟನೆ ಜರುಗಿದೆ.
ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ಸಚಿವರ ಕಾರನ್ನು ವಿಐಪಿ ಪಾರ್ಕಿಂಗ್ ಪ್ರದೇಶದಿಂದ ತೆಗೆದ ನಂತರ ಸಚಿವ ಪೆರ್ಣಿ ವೆಂಕಟರಾಮಯ್ಯ ಸಂಯಮ ಕಳೆದುಕೊಂಡಿದ್ದಾರೆ. ಭದ್ರತಾ ಸಿಬ್ಬಂದಿ ನಡೆಯಿಂದ ಅಸಮಾಧಾನಗೊಂಡ ಅವರು, ಪೊಲೀಸ್ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
BIG NEWS: ಆಳವಾದ ಕಮರಿಗೆ ಬಿದ್ದ ಕಾರು, ಐವರ ಸಾವು
ನಿಮ್ಮ ಕಾರನ್ನು ಮತ್ತೊಂದು ಪ್ರದೇಶದಲ್ಲಿ ನಿಲ್ಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ವಿವರಿಸಲು ಪ್ರಯತ್ನಿಸಿದರು, ಸಚಿವರು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯನ್ನು ಗದರಿಸಿದ್ದಾರೆ. ಇಬ್ಬರ ನಡುವಿನ ಸಂಭಾಷಣೆ ಹಾಗೂ ಸಂಯಮ ಕಳೆದುಕೊಂಡ ಸಚಿವರು ದೂರದಿಂದಲೆ ದೊಡ್ಡ ಧ್ವನಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ಗದರಿಸಿರುವ ವಿಡಿಯೋ, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯನ್ನು ಪ್ರತಿಪಕ್ಷ ನಾಯಕ ನಾರಾ ಲೋಕೇಶ್ ತೀವ್ರವಾಗಿ ಖಂಡಿಸಿದ್ದಾರೆ. ಸಚಿವರ ವರ್ತನೆಯನ್ನು ಟೀಕಿಸಿದ ಅವರು, ಮುಖ್ಯಮಂತ್ರಿಗಳ ವೈಜಾಗ್ ಭೇಟಿಯ ಸಂದರ್ಭದಲ್ಲಿ ಇನ್ನೊಬ್ಬ ಸಚಿವರು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯನ್ನು ಹೇಗೆ ನಿಂದಿಸಿದ್ದರು ಎಂಬುದನ್ನು ನೆನಪಿಸಿಕೊಂಡರು. ಸ್ವತಃ ಸಚಿವರೇ ಪೊಲೀಸರನ್ನು ನಿಂದಿಸಿ ಬೆದರಿಕೆ ಹಾಕುತ್ತಿರುವುದು ಅರಾಜಕ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.