
ಮುದ್ದಿನ ಮಗಳ ಜೀವನ ಸಂಗಾತಿಯಾಗಿರೋ ಅಳಿಯ ಮೊದಲ ಬಾರಿ ಮನೆಗೆ ಬರ್ತಾನೆ ಅಂದ್ರೆ ಸಾಕು, ಮನೆಯಲ್ಲಿ ಸಂಭ್ರಮ ಕಳೆಗಟ್ಟಿರುತ್ತೆ. ಅದರಲ್ಲೂ ಅತ್ತೆ-ಮಾವ ಅಂತೂ ಅಳಿಯನಿಗೆ ಅದ್ದೂರಿಯಾಗಿ ಸ್ವಾಗತ ಕೋರುವುದಕ್ಕೆ ಏನೇನು ಸಾಧ್ಯವೋ ಅದೆಲ್ಲವನ್ನೂ ಮಾಡಿರ್ತಾರೆ. ಇತ್ತೀಚೆಗೆ ಆಂಧ್ರದಲ್ಲಿ ಅಳಿಯನಿಗೆ ಭರ್ಜರಿಯಾಗಿ ಸ್ವಾಗತ ಮಾಡಿರೋ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಸಂಕ್ರಾಂತಿ ಕೂಡ ಒಂದು. ಈ ಹಬ್ಬದಂದು ಮನೆಗೆ ಬರುವ ಅಳಿಯನಿಗಾಗಿ ವಿಶೇಷ ಖಾದ್ಯಗಳನ್ನ ತಯಾರಿಸಿದ್ದರು. ನೀವೆಲ್ಲ ನಂಬಿರೋ ಇಲ್ವೇ….. ಇಲ್ಲಿ ಬರೋಬ್ಬರಿ 173 ಬಗೆಯ ಖಾದ್ಯಗಳನ್ನ ಅಳಿಯನಿಗಂತಾನೇ ತಯಾರಿಸಿ ಬಡಿಸಿದ್ದರು. ಅಳಿಯ ಇಷ್ಟು ವೆರೈಟಿ ತಿಂಡಿಗಳನ್ನ ನೋಡಿ ದಂಗಾಗಿದ್ದಂತೂ ಸತ್ಯ.
ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿರುವ ಉದ್ಯಮಿ ತಟವರ್ತಿ ಬದ್ರಿ ಮತ್ತು ಸಂಧ್ಯಾ, ತಮ್ಮ ಮಗಳು ಹರಿಕಾ ಇತ್ತೀಚೆಗೆ ಅಳಿಯ ಪೃಥ್ವಿ ಬಂದಾಗ ಹೀಗೆ ಇಡೀ ಡೈನಿಂಗ್ ಟೇಬಲ್ ತುಂಬುವಷ್ಟು ಭೂರಿ ಭೋಜನ ಸಿದ್ಧಪಡಿಸಿ. ಅವರ ಮುಂದಿಟ್ಟಿದ್ದರು. ಈ ರೀತಿ ಭರ್ಜರಿ ಭೋಜನ ಅಳಿಯನಿಗೆ ಉಣಬಡಿಸುವುದು ಆಂಧ್ರಪ್ರದೇಶದಲ್ಲಿ ಸಾಮಾನ್ಯ. ಕೆಲ ಕುಟುಂಬಗಳಲ್ಲಂತೂ 300ಕ್ಕೂ ಹೆಚ್ಚು ತಿಂಡಿ-ತಿನಿಸುಗಳನ್ನ ಅವರಿಗೆ ಉಣಬಡಿಸುತ್ತಾರೆ. ಅಳಿಯನಿಗೆ ಭರ್ಜರಿಯಾಗಿ ವೆಲ್‌ಕಮ್ ಮಾಡೋದು ಅಂದ್ರೆ ಬಹುಶಃ ಇದೆ ಇರಬಹುದೇನೋ..!