ನವರಾತ್ರಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ದೇವಿ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರಗಳನ್ನು ಮಾಡಲಾಗ್ತಿದೆ. ಆಂಧ್ರಪ್ರದೇಶದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲೂ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಕನ್ನಿಕಾ ಪರಮೇಶ್ವರಿ ದೇವಿ ದೇವಸ್ಥಾನವನ್ನು ನೋಟುಗಳಿಂದ ಅಲಂಕರಿಸಲಾಗಿದೆ.
ಐದು ಕೋಟಿಗೂ ಹೆಚ್ಚು ಮೌಲ್ಯದ ನೋಟುಗಳಿಂದ ಕನ್ನಿಕಾ ದೇವಿ ದೇವಸ್ಥಾನವನ್ನು ಅಲಂಕರಿಸಲಾಗಿದೆ. 100 ಕ್ಕೂ ಹೆಚ್ಚು ಸ್ವಯಂ ಸೇವಕರು ಈ ಕೆಲಸದಲ್ಲಿ ಕೈ ಜೋಡಿಸಿದ್ದಾರೆ. ದೇವಸ್ಥಾನದ ಅಲಂಕಾರಕ್ಕಾಗಿ 2000 ರೂಪಾಯಿ ನೋಟು, 500ರ ನೋಟು, 200 ಮತ್ತು 100ರ ನೋಟು ಹಾಗೂ 50, 10 ರೂಪಾಯಿ ನೋಟುಗಳನ್ನು ಬಳಸಿಕೊಳ್ಳಲಾಗಿದೆ.
ನವರಾತ್ರಿ ಸ್ಪೆಷಲ್ ʼಕೊಬ್ಬರಿ ಹಲ್ವಾʼ
ನಾಲ್ಕು ವರ್ಷಗಳ ಹಿಂದೆ 11 ಕೋಟಿ ಖರ್ಚು ಮಾಡಿ ಕನ್ನಿಕಾ ಪರಮೇಶ್ವರಿ ದೇವಿ ದೇವಸ್ಥಾನವನ್ನು ನವೀಕರಿಸಲಾಗಿತ್ತು. ಪ್ರತಿ ವರ್ಷವೂ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಬಾರಿಯೂ ನವರಾತ್ರಿಗೆ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗ್ತಿದೆ. 7 ಕೆ.ಜಿ. ಚಿನ್ನ ಹಾಗೂ 60 ಕೆ.ಜಿ. ಬೆಳ್ಳಿಯನ್ನು ದೇವಿ ಅಲಂಕಾರಕ್ಕೆ ಬಳಸಲಾಗಿದೆ.
2020ರಲ್ಲಿ ತೆಲಂಗಾಣದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ 1 ಕೋಟಿ ಮೌಲ್ಯದ ನೋಟುಗಳನ್ನು ಅಲಂಕಾರಕ್ಕೆ ಬಳಸಲಾಗಿತ್ತು.