ಆಂಧ್ರಪ್ರದೇಶದ ಡಿಸಿಎಂ ‘ಪವನ್ ಕಲ್ಯಾಣ್’ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರು ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ. ವೈದ್ಯರು ಸ್ಕ್ಯಾನ್ ಸೇರಿದಂತೆ ಕೆಲವು ಪರೀಕ್ಷೆಗಳನ್ನು ನಡೆಸಿದರು. ಫಲಿತಾಂಶಗಳನ್ನು ಪರಿಶೀಲಿಸಿದ ನಂತರ, ಒಂದೆರಡು ವಾರಗಳ ಕಾಲ ವಿಶ್ರಾಂತಿ ಪಡೆಯವಂತೆ ಸೂಚನೆ ನೀಡಿದ್ದಾರೆ. ಹಾಗೂ ಹೆಚ್ಚುವರಿ ಪರೀಕ್ಷೆಗಳಿಗೆ ಒಳಗಾಗುವಂತೆ ಅವರು ಪವನ್ ಅವರನ್ನು ಕೇಳಿದರು ಎಂದು ವರದಿಯಾಗಿದೆ.
ಪವನ್ ಬೆನ್ನಿಗೆ ಗಾಯ
ಪವನ್ ಹಲವಾರು ವರ್ಷಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಪವನ್ ಕಲ್ಯಾಣ್ ಆಸ್ಪತ್ರೆಗೆ ಭೇಟಿ ನೀಡಿದ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳು ಗಾಬರಿಗೊಳಗಾಗಿದ್ದಾರೆ..
అపోలో ఆసుపత్రిలో వైద్య పరీక్షలు చేయించుకున్న శ్రీ @PawanKalyan గారు
రాష్ట్ర ఉప ముఖ్యమంత్రి శ్రీ పవన్ కల్యాణ్ గారు ఈ రోజు హైదరాబాద్ అపోలో ఆసుపత్రిలో పరీక్షలు చేయించుకున్నారు. స్కానింగ్, తత్సంబంధిత పరీక్షలు నిర్వహించారు. రిపోర్ట్స్ పరిశీలించిన వైద్యులు పలు సూచనలు చేశారు. మరికొన్ని… pic.twitter.com/TjeWc4T0WZ— JanaSena Party (@JanaSenaParty) February 22, 2025