ವಿವಾಹ ವಿಚ್ಛೇದನ ಪರಿಹಾರವಾಗಿ ಸೊಸೆಗೆ, ಒಂದು ಕೋಟಿ ರೂಪಾಯಿ ನೀಡುವಂತೆ ವಿಜಯವಾಡದ ನ್ಯಾಯಾಲಯ ಮಾಜಿ ಕಾಂಗ್ರೆಸ್ ನಾಯಕನಿಗೆ ಆದೇಶ ನೀಡಿದೆ. ವಿಜಯವಾಡದ ಮೊದಲ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಲಯವು ಜನವರಿ 19ರ ಬುಧವಾರದಂದು ಈ ತೀರ್ಪು ನೀಡಿದೆ.
ಆಂಧ್ರದ ಮಾಜಿ ಕಾಂಗ್ರೆಸ್ ಸಚಿವ, ಹಾಲಿ ಬಿಜೆಪಿ ನಾಯಕ ಕನ್ನ ಲಕ್ಷ್ಮೀನಾರಾಯಣ ಅವರ ಸೊಸೆ ದೌರ್ಜನ್ಯದ ಆರೋಪ ಹೊರಿಸಿ ವಿಚ್ಛೇದನಕ್ಕೆ ಮನವಿ ಸಲ್ಲಿಸಿದ್ದರು. ಮರ್ರಿ ಚೆನ್ನಾರೆಡ್ಡಿ, ವೈಎಸ್ ರಾಜಶೇಖರ ರೆಡ್ಡಿ, ಕೆ ರೋಸಯ್ಯ ಮತ್ತು ಕಿರಣ್ ಕುಮಾರ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ಕನ್ನ ಲಕ್ಷ್ಮೀನಾರಾಯಣ ಅವರು ಕಾಂಗ್ರೆಸ್ ಸಚಿವರಾಗಿದ್ದರು.
ಹೋಂ ಐಸೋಲೇಷನ್ ನಲ್ಲಿ ಕರ್ನಾಟಕ, ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿರುವ 5 ಲಕ್ಷಕ್ಕೂ ಹೆಚ್ಚು ಜನ
ಕನ್ನ ಲಕ್ಷ್ಮೀನಾರಾಯಣ ಅವರ ಮಗ, ಕನ್ನ ನಾಗರಾಜು ಮತ್ತು ಶ್ರೀಲಕ್ಷ್ಮಿ ಕೀರ್ತಿ ಅವರು ಮೇ 10, 2016 ರಂದು ಪ್ರೇಮ ವಿವಾಹವಾಗಿದ್ದರು. ದಂಪತಿಗೆ 2013 ರಲ್ಲಿ ಹೆಣ್ಣು ಮಗು ಜನಿಸಿತ್ತು. ಕೀರ್ತಿ ಅವರು ಸಲ್ಲಿಸಿದ ಕೌಟುಂಬಿಕ ದೌರ್ಜನ್ಯ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ಬುಧವಾರದಂದು ಈ ಆದೇಶವನ್ನು ನೀಡಿದೆ.
ನಿಗದಿತ ಸಮಯದ ಮೊದಲು ಪರಿಹಾರವನ್ನು ನೀಡಲು ವಿಫಲವಾದರೆ, ಅದಕ್ಕೆ 12% ಬಡ್ಡಿಯನ್ನು ಸೇರಿಸಲಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ. ಕೀರ್ತಿಯವರಿಗೆ ಪೊಲೀಸರ ರಕ್ಷಣೆ ಒದಗಿಸುವುದರ ಜೊತೆಗೆ, ಅಮ್ಮ-ಮಗಳಿಗೆ ವಸತಿ ಸೌಕರ್ಯ ಕಲ್ಪಿಸಿ, ಮೊಮ್ಮಗಳ ಚಿಕಿತ್ಸೆಗೆ ಐವತ್ತು ಸಾವಿರ ರೂಪಾಯಿ ನೀಡುವಂತೆ ಕೋರ್ಟ್ ಆದೇಶ ನೀಡಿದೆ.