
ಎರಡು ವರ್ಷಗಳ ಹಿಂದೆ ಜೀವನದಲ್ಲಿ ಕತ್ತಲಾವರಿಸಿದ್ದ ಆಂಧ್ರ ಮೂಲದ ಟಿ ಅಪ್ಪಲ ರಾಜು ಮತ್ತು ಭಾಗ್ಯಲಕ್ಷ್ಮಿ ದಂಪತಿಗಳ ಬಾಳಿನಲ್ಲಿ ಮತ್ತೆ ಬೆಳಕು ಮೂಡಿದೆ. ಸೆಪ್ಟೆಂಬರ್ 15, 2019 ರಂದು ದೋಣಿ ಅಪಘಾತದಲ್ಲಿ ತಮ್ಮ ಅವಳಿ ಹೆಣ್ಣುಮಕ್ಕಳನ್ನು ಕಳೆದುಕೊಂಡಿದ್ದ ದಂಪತಿಗಳಿಗೆ ಎರಡು ವರ್ಷಗಳ ಬಳಿಕ ಮತ್ತೆ ಅದೃಷ್ಟ ಒಲಿದಿದೆ.
ಎರಡು ವರ್ಷಗಳ ಹಿಂದೆ ಗೋದಾವರಿ ನದಿಯ ದೋಣಿ ಅಪಘಾತದಲ್ಲಿ ತಮ್ಮ ಇಬ್ಬರು ಅವಳಿ ನವಜಾತ ಶಿಶುಗಳನ್ನು ಕಳೆದುಕೊಂಡ ನಂತರ ಅವರ ಪ್ರಪಂಚವೇ ಕುಸಿದು ಹೋಗಿತ್ತು. ಇದೀಗ ಐವಿಎಫ್ ಮುಖಾಂತರ ಅವಳಿ ಮಕ್ಕಳನ್ನು ಈ ದಂಪತಿ ಪಡೆದುಕೊಂಡಿದ್ದು, ಇವರ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ.
ರಿಮೋಟ್ ಕಂಟ್ರೋಲ್ಡ್ ಕಾರು ಬೆನ್ನಟ್ಟಿದ ಶ್ವಾನಗಳು: ವಿಡಿಯೋ ವೈರಲ್
“ಇದು ದೇವರ ಆಶೀರ್ವಾದ. ನಮಗೆ ತುಂಬಾ ಸಂತೋಷವಾಗಿದೆ. ಇದೆಲ್ಲವೂ ದೇವರ ಕೃಪೆಯಾಗಿದೆ” ಎಂದು ಭಾಗ್ಯಲಕ್ಷ್ಮಿ ಹೇಳಿದ್ದಾರೆ.
ಸೆಪ್ಟೆಂಬರ್ 15, 2019 ರಂದು ಗೋದಾವರಿಯಲ್ಲಿ ದೋಣಿ ಅಪಘಾತದಲ್ಲಿ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಕಳೆದುಕೊಂಡಿದ್ದ ಈ ದಂಪತಿಗಳು, ಸೆಪ್ಟೆಂಬರ್ 15, 2021 ರಂದು ಐವಿಎಫ್ ಮುಖಾಂತರ ಮಕ್ಕಳನ್ನು ಪಡೆದಿದ್ದಾರೆ.