ಮೈಸೂರು: ಅಂಧಕಾಸುರ ಸಂಹಾರ ಆಚರಣೆಯಲ್ಲಿ ಮಹಿಷ ರಂಗೋಲಿ ತುಳಿದ ಹಲವರ ವಿರುದ್ಧ ಎಫ್ ಐ ಆರ್ ದಾಖಲಿಸಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡಿನಲ್ಲಿ ಅಂಧಕಾಸುರನ ಸಂಹಾರ ಆಚರಣೆ ನಡೆಸಲಾಗುತಿತ್ತು. ಈ ವೇಳೆ ಬೃಹತ್ ಮಹಿಷ ರಂಗೋಲಿ ಹಾಕಲಾಗಿದೆ. ಈ ವೇಳೆ ಗಲಾಟೆ ನಡೆದಿದೆ. ಮೌಢ್ಯಾಚರಣೆ ಮಾಡುತ್ತಿದ್ದಾರೆ ಎಂದು ನಂಜನಗೂಡು ಠಾಣೆಯಲ್ಲಿ ಮಾಲೇಶ್ ಎಂಬುವವರು ದೂರು ನೀಡಿದ್ದು, ಕಲಿಪೇಶ್, ಅನಂತ್, ಕಿರಣ್, ರಾಜು, ರವಿ, ಗಿರೀಶ್ ಸೇರಿದಂತೆ 6 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಮಹಿಷನ ಫ್ಲೆಕ್ಸ್ ಅಳವಡಿಸಿ ರೊಂಗಲಿ ಬಿಡಿಸಿ ಬಳಿಕ ಸಂಹಾರ ಮಾಡಲಾಗಿದೆ. ಮಹಿಷ ಚಿತ್ರ ತುಳಿಯುವ ವೇಳೆ ಕೆಲವರು ವಿರೋಧಿಸಿದ್ದು ಈ ವೇಳೆ ಹಲ್ಲೆ ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಅಂಧಕಾಸುರ ಸಂಹಾರ ಆಚರಣೆ ತಡೆದವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಬಸವರಾಜು, ಮೆಲ್ಲಹಳ್ಳಿ ನಾರಾಯಣ, ಅಭಿನಾಗಭೂಷನ್, ನಟೇಶ್ ಅಭಿ ಪವಾರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.