ಬೆಂಗಳೂರು ನಗರದಲ್ಲಿ ಇತ್ತೀಚಿಗೆ ಆಗಿರುವ ಶೂಟೌಟ್ ನಿಂದ ಜೈಲು ಸೇರಿರುವ ರಾಹುಲ್ ಎನ್ನುವ ಆರೋಪಿಯನ್ನ ಜೈಲಿನಿಂದ ಬಿಡಿಸಲು ಆತನ ಗುರು ಹಾಗೂ ಶಿಷ್ಯರು ಮತ್ತೆ ಅಡ್ಡದಾರಿ ಹಿಡಿದಿದ್ದಾರೆ. ರಾಹುಲ್ ಅರೆಸ್ಟ್ ಆಗಿ ಒಂದೇ ದಿನದ ನಂತರ ಮತ್ತೆ ಗಾಂಜಾ ಮಾರಾಟಕ್ಕೆ ಇಳಿದಿದ್ದಾರೆ. ರಾಹುಲ್ ಗುರು ಕುಳ್ಳ ರಿಜ್ವಾನ್ ಹಾಗೂ ಕಿರಣ್, ಮಂಜು, ಕಾರ್ತಿಕ್ ಎನ್ನುವವರು ಗಾಂಜಾ ಮಾರಾಟ ಮಾಡಿ, ಆ ದುಡ್ಡಿನಿಂದ ಬೇಲ್ ಪಡೆದು ರಾಹುಲ್ ನನ್ನು ಜೈಲಿನಿಂದ ಬಿಡಿಸಲು ಸ್ಕೆಚ್ ಹಾಕಿದ್ದರು.
BIG SHOCKING NEWS: ಸಿಎಂ ಮನೆ ಭದ್ರತೆಗಿದ್ದ ಕಾನ್ಸ್ ಟೇಬಲ್ ಗಳಿಂದಲೇ ಗಾಂಜಾ ಡೀಲ್; ಇಬ್ಬರು ಪೊಲೀಸರು ಅರೆಸ್ಟ್
ಆಂಧ್ರದಲ್ಲಿರುವ ರಾಹುಲ್ ನ ಗುರು ಕುಳ್ಳ ರಿಜ್ವಾನ್ ಹಾಗೂ ಗುಡ್ಡೆ ಭರತ ಬೆಂಗಳೂರಿಗೆ 20 ಕೆಜಿ ಗಾಂಜಾ ಕಳಿಸಿದ್ದರು. ಅದನ್ನ ಪಡೆದು ಕಿರಣ್, ಕಾರ್ತಿಕ್, ಮಂಜು ಬೆಂಗಳೂರಿನಲ್ಲಿ ಮಾರಾಟ ಮಾಡ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ನಗರದ ಕೆ.ಆರ್. ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡ್ತಿದ್ದ ಮೂವರನ್ನ ಬಂಧಿಸಿದ್ದಾರೆ. ಕಿರಣ್, ಮಂಜು, ಕಾರ್ತಿಕ್ ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಕಾರ್, 20 ಕೆಜಿ ಗಾಂಜಾವನ್ನ ವಶಪಡಿಸಿಕೊಂಡಿದ್ದು, ಬಂಧಿತರು ಸೇರಿದಂತೆ ಕುಳ್ಳ ರಿಜ್ವಾನ್, ಗುಡ್ಡೆ ಭರತನ ವಿರುದ್ಧ ಎನ್ ಡಿ ಪಿ ಎಸ್ & ಆರ್ಮ್ಸ್ ಆ್ಯಕ್ಟ್ ಅಡಿಯಲ್ಲಿ ವಿ.ವಿ. ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.