
ಮುಂಬೈ: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಕಿರಿಯ ಪುತ್ರ , ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕ ಅನಂತ ಅಂಬಾನಿ ದೇವನಗರಿಯತ್ತ ಪಾದಯಾತ್ರೆ ಕೈಗೊಂಡಿದ್ದಾರೆ.
ಗುಜರಾತ್ ನ ಜಾಮ್ ನಗರದಿಂದ ದೇವಭೂಮಿ ದ್ವಾರಕಾಗೆ ಬರೋಬ್ಬರಿ 141 ಕಿ.ಮೀ ಪಾದಯಾತ್ರೆ ಹೊರಟಿದ್ದಾರೆ. ಮುಂದಿನ ನಾಲ್ಕೈದು ದಿನಗಳಲ್ಲಿ ಅನಂತ ಅಂಬಾನಿ ದ್ವಾರಕಾ ತಲುಪಲಿದ್ದಾರೆ.
ಏಪ್ರಿಲ್ 10 ರಂದು ಅನಂತ್ ಅಂಬಾನಿ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅನಂತ ಅಂಬಾನಿ ದ್ವಾರಕಾಗೆ ಕಾಲ್ನಡಿಗೆಯಲ್ಲಿ ತೆರಳಿ ಭಗವಾನ್ ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ. ಈ ವೇಳೆ ದ್ವಾರಕಾದಲ್ಲಿ ಹಲವು ಧರಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಭದ್ರತೆಯ ಕಾರಣಕ್ಕೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅನಂತ್ ಅಂಬಾನಿ ರಾತ್ರಿ ವೇಳೆ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅನಂತ್ ಅಂಬಾನಿ ಕಳೆದ ಐದು ದಿನಗಳ ಹಿಂದೆ ಜಾಮ್ ನಗರದ ನಮ್ಮ ಮನೆಯಿಂದ ಪಾದಯಾತ್ರೆ ಆರಂಭಿಸಿದ್ದೇನೆ. ಯಾವುದೇ ಕೆಲಸ ಆರಂಭಕ್ಕೂ ಮುನ್ನ ನಾವು ದೇವರಲ್ಲಿ ನಂಬಿಕೆ ಇಟ್ಟರೆ ಅದು ಖಂಡಿತವಾಗಿಯೂ ನೆರವೇರುತ್ತದೆ. ದೇವರು ಇರುವಾಗ ಚಿಂತೆಗೆ ಜಾಗವಿಲ್ಲ. ದ್ವಾರಕಾದೀಶನು ನಮ್ಮನ್ನು ಆಶಿರ್ವದಿಸಲಿ ಎಂದು ಹೇಳಿದ್ದಾರೆ.