alex Certify ಐಷಾರಾಮಿ ಕ್ರೂಸ್‌ನಲ್ಲಿ ನಡೆಯಲಿದೆ ಅನಂತ್‌ ಅಂಬಾನಿ-ರಾಧಿಕಾ ಮರ್ಚಂಟ್‌ ಪ್ರಿವೆಡ್ಡಿಂಗ್‌; 800 ಅತಿಥಿಗಳಿಗೆ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಷಾರಾಮಿ ಕ್ರೂಸ್‌ನಲ್ಲಿ ನಡೆಯಲಿದೆ ಅನಂತ್‌ ಅಂಬಾನಿ-ರಾಧಿಕಾ ಮರ್ಚಂಟ್‌ ಪ್ರಿವೆಡ್ಡಿಂಗ್‌; 800 ಅತಿಥಿಗಳಿಗೆ ಆಹ್ವಾನ

ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹ ಜುಲೈನಲ್ಲಿ ನೆರವೇರಲಿದೆ. ಮದುವೆಗೂ ಮುನ್ನ ಅಂಬಾನಿ ಕುಟುಂಬ ವಧು-ವರರಿಗಾಗಿ ಅದ್ಧೂರಿಯಾಗಿ ವಿವಾಹ ಪೂರ್ವ ಕಾರ್ಯಕ್ರಮ ಆಯೋಜಿಸಿದೆ.

ಈ ಹಿಂದೆ ಜಾಮ್‌ನಗರದಲ್ಲಿ ಮೂರು ದಿನಗಳ ಕಾಲ ಪ್ರೀ ವೆಡ್ಡಿಂಗ್ ಫಂಕ್ಷನ್ ನಡೆದಿತ್ತು. ಇದೀಗ ಅನಂತ್ ರಾಧಿಕಾಗಾಗಿ ಎರಡನೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಆಯೋಜಿಸಲಾಗಿದೆ. ಐಷಾರಾಮಿ ವಿಹಾರವನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ.

ಈ ಬಾರಿ ಇಟಲಿಯಲ್ಲಿ ಪ್ರಿ ವೆಡ್ಡಿಂಗ್‌ ಫಂಕ್ಷನ್‌ ನಡೆಯಲಿದೆ. ಇದಕ್ಕಾಗಿ ಐಷಾರಾಮಿ ಕ್ರೂಸ್‌ ಒಂದನ್ನು ಸಿದ್ಧಪಡಿಸಲಾಗಿದೆ. ಮೇ 29ರಿಂದ ಜೂನ್ 1 ರವರೆಗೆ ಪ್ರಿವೆಡ್ಡಿಂಗ್‌ ಆಯೋಜಿಸಲಾಗಿದೆ. ಮೇ 29ರಂದು ಅಂಬಾನಿ ಕುಟುಂಬದ ವಿಶೇಷ ಅತಿಥಿಗಳನ್ನು ಹೊತ್ತು ಇಟಲಿಯ ಪಲೆರ್ಮೊ ಬಂದರಿನಿಂದ ಈ ನೌಕಾಯಾನ ಹೊರಡಲಿದ್ದು, 4380 ಕಿಲೋಮೀಟರ್ ಪ್ರಯಾಣಿಸಿ ಜೂನ್ 1ರಂದು ದಕ್ಷಿಣ ಫ್ರಾನ್ಸ್ ತಲುಪಲಿದೆ.

ಸೆಲೆಬ್ರಿಟಿ ಅಸೆಂಟ್ ಕ್ರೂಸ್ ಸಮುದ್ರದಲ್ಲಿ ತೇಲುತ್ತಿರುವ 5 ಸ್ಟಾರ್ ಹೋಟೆಲ್. ಕ್ರೂಸ್‌ನಲ್ಲಿರುವ 5-ಸ್ಟಾರ್ ಹೋಟೆಲ್‌ನಲ್ಲಿ ಎಲ್ಲಾ ಸೌಲಭ್ಯಗಳಿವೆ. 3279 ಜನರು ಇದರಲ್ಲಿ ಪ್ರಯಾಣಿಸಬಹುದು. ಅನಂತ್‌ ಅಂಬಾನಿ ಅವರ ಪ್ರಿವೆಡ್ಡಿಂಗ್‌ ನಿಮಿತ್ತ ಭಾರತ ಮತ್ತು ವಿದೇಶಗಳಿಂದ 800 ಅತಿಥಿಗಳು ಆಗಮಿಸುತ್ತಿದ್ದಾರೆ. ಈ ಅತಿಥಿಗಳನ್ನು ಉಪಚರಿಸಲು 600 ಸಿಬ್ಬಂದಿ ಇರುತ್ತಾರೆ.

ಅತಿಥಿಗಳು 12 ವಿಮಾನಗಳಲ್ಲಿ ಇಟಲಿ ತಲುಪುತ್ತಿದ್ದಾರೆ. ಮೇ 29 ರಂದು ಇಟಲಿಯ ಪಲೆರ್ಮೊ ಬಂದರಿನಿಂದ ಪ್ರಯಾಣ ಆರಂಭವಾಗಲಿದೆ. ಪ್ರಿವೆಡ್ಡಿಂಗ್‌ನ ಆಹ್ವಾನ ಪತ್ರಿಕೆ ಕೂಡ ವೈರಲ್‌ ಆಗಿದೆ.

29 ರಂದು ಸಂಜೆ ಪಾರ್ಟಿ ಆಯೋಜಿಸಲಾಗಿದೆ. ಸತತ ನಾಲ್ಕು ದಿನಗಳ ಕಾಲ ಬೇರೆ ಬೇರೆ ಥೀಮ್‌ ಅಡಿಯಲ್ಲಿ ಪಾರ್ಟಿಗಳು ನಡೆಯಲಿವೆ. 4380 ಕಿಲೋಮೀಟರ್ ಪ್ರಯಾಣದ ನಂತರ ದಕ್ಷಿಣ ಫ್ರಾನ್ಸ್‌ನಲ್ಲಿ ಪ್ರಿವೆಡ್ಡಿಂಗ್‌ ಕೊನೆಗೊಳ್ಳಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...