ದೆಹಲಿ: ಭಾರತದ ಕೊರೋನಾ ಲಸಿಕೆ ನೀಡುತ್ತಿರುವ ವೇಗದ ಬಗ್ಗೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್ ನಲ್ಲಿ ಶ್ಲಾಘಿಸಿದ್ದಾರೆ. ದೇಶದಲ್ಲಿ ದಿನನಿತ್ಯ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಮಂಗಳವಾರ ಇದು 1 ಕೋಟಿ ದಾಟಿದೆ.
ಈ ಮೂಲಕ ಐದು ದಿನಗಳಲ್ಲಿ ಎರಡು ಬಾರಿ ಒಂದು ಕೋಟಿ ದಾಟಿದ ದಾಖಲೆ ಬರೆದಿದೆ. ಆದರೆ, ನಿಧಾನಗತಿಯ ವ್ಯಾಕ್ಸಿನೇಷನ್ ಬಗ್ಗೆ ಅರ್ಥಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿದ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ, “ಭಾರತವು ಕೇವಲ ಒಂದು ದಿನದಲ್ಲಿ 12 ಮಿಲಿಯನ್ ಗಡಿ ತಲುಪಿದೆ. ನಮ್ಮ ಜನಸಂಖ್ಯೆ ದೊಡ್ಡದಿರುವುದರಿಂದ ಕೆಲಸ ಕಠಿಣವಾಗುತ್ತದೆ. ನಾನು ಹೇಳಿದ್ದು ತಪ್ಪಲ್ಲವಾದರೆ, ನಮ್ಮಲ್ಲಿ ಪ್ರತಿ 3 ದಿನಗಳಿಗೊಮ್ಮೆ ಒಂದು ಆಸ್ಟ್ರೇಲಿಯಾಗೆ ಸಮನಾದ ಲಸಿಕೆ ಹಾಕಲಾಗುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಕೋವಿನ್ ಪೋರ್ಟಲ್ ಮಾಹಿತಿಯ ಪ್ರಕಾರ, ಮಂಗಳವಾರ ದಾಖಲೆಯ ಗರಿಷ್ಠ 1.32 ಕೋಟಿ ಕೋವಿಡ್-19 ಲಸಿಕೆ ಪ್ರಮಾಣ ನೀಡಲಾಗಿದೆ.
ಗೆಳತಿಯೊಂದಿಗಿದ್ದ ಪತಿಯನ್ನು ರೆಡ್ ಹ್ಯಾಂಡಾಗಿ ಹಿಡಿದ ಪತ್ನಿ…! ಪರಸ್ತ್ರೀಗೆ ಬಿತ್ತು ಧರ್ಮದೇಟು
ಭಾರತವು 10 ಕೋಟಿಗಳ ಜನಸಂಖ್ಯೆ ತಲುಪಲು 85 ದಿನಗಳನ್ನು ತೆಗೆದುಕೊಂಡಿತ್ತು. ನಂತರ 20 ಕೋಟಿ ಗಡಿ ದಾಟಲು 45 ದಿನಗಳು ಹಾಗೂ 30 ಕೋಟಿ ತಲುಪಲು 29 ದಿನಗಳು ಬೇಕಾಯಿತು. ದೇಶವು 40 ಕೋಟಿ ತಲುಪಲು 24 ದಿನಗಳನ್ನು ತೆಗೆದುಕೊಂಡಿತು. ನಂತರ 50 ಕೋಟಿ ಲಸಿಕೆಗಳನ್ನು ದಾಟಲು 20 ದಿನಗಳು ಬೇಕಾಯಿತು. ಆಗಸ್ಟ್ 25ರ ವೇಳೆಗೆ 60 ಕೋಟಿಗಳ ಗಡಿ ದಾಟಲು ಇನ್ನೂ 19 ದಿನಗಳು ಬೇಕಾಯಿತು.
ಕಳೆದ ಒಂದು ವಾರದಲ್ಲಿ ಭಾರತದಲ್ಲಿ ಸರಾಸರಿ 74.09 ಲಕ್ಷ ಲಸಿಕೆ ಡೋಸ್ ಗಳನ್ನು ಪ್ರತಿದಿನ ನೀಡಲಾಗುತ್ತಿದೆ. ಭಾರತವು 114 ದಿನಗಳ ಕಡಿಮೆ ಅವಧಿಯಲ್ಲಿ 17 ಕೋಟಿ ಲಸಿಕೆ ನೀಡಿರುವುದು ವಿಶ್ವದಾಖಲೆಯಾಗಿದೆ.