
ಹೌದು, 10 ವರ್ಷಗಳ ಕಠಿಣ ಪರಿಶ್ರಮದ ನಂತರ ಅಶೋಕ್ ಕುಮಾರ್ ಎಂಬವರು ತಮ್ಮ ಕನಸಿನ ಕಾರು ಮಹೀಂದ್ರಾ ಎಸ್ ಯು ವಿ 700 ಅನ್ನು ಖರೀದಿಸಿದ್ರು. ಈ ಖುಷಿಯ ಕ್ಷಣವನ್ನು ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಹೊಚ್ಚ ಹೊಸ ವಾಹನದ ಮುಂದೆ ನಿಂತಿರುವ ತಮ್ಮ ಫೋಟೋವನ್ನು ಹಂಚಿಕೊಂಡಾಗ ಆನಂದ್ ಮಹೀಂದ್ರಾ ಅವರ ಆಶೀರ್ವಾದವನ್ನು ಕೋರಿದ್ದಾರೆ. ಇದಕ್ಕೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಟ್ವೀಟ್ಗೆ ಪ್ರತಿಕ್ರಿಯಿಸಿದ್ದಾರೆ. ಅವರ ಉತ್ತರವು ಆನ್ಲೈನ್ನಲ್ಲಿ ಅನೇಕರ ಹೃದಯಗಳನ್ನು ಗೆದ್ದಿದೆ.
ಅಶೋಕ್ಕುಮಾರ್ ತಮ್ಮ ಬಿಳಿ ಬಣ್ಣದ ಎಸ್ಯುವಿ ಕಾರಿನ ಮುಂದೆ ನಿಂತುಕೊಂಡಿರುವ ಫೋಟೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. 10 ವರ್ಷಗಳ ಕಠಿಣ ಪರಿಶ್ರಮದ ನಂತರ ಹೊಸ ಕಾರನ್ನು ಖರೀದಿಸಿದ್ದು, ಆನಂದ್ ಮಹೀಂದ್ರಾ ಅವರೇ ನಿಮ್ಮ ಆಶೀರ್ವಾದ ಬೇಕು ಸರ್ ಎಂದು ಬರೆದಿದ್ದಾರೆ. ಇದಕ್ಕೆ ಉತ್ತರಿಸಿರುವ ಉದ್ಯಮಿ, ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ, ನಿಮ್ಮ ಆಯ್ಕೆಯಿಂದ ನಮ್ಮನ್ನು ಆಶೀರ್ವದಿಸಿದವರು ನೀವೇ, ಕಠಿಣ ಪರಿಶ್ರಮದಿಂದ ಬಂದ ನಿಮ್ಮ ಯಶಸ್ಸಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.