ರಾಷ್ಟ್ರೀಯ ವೈಮಾನಿಕ ವಾಹಕ ಏರ್ ಇಂಡಿಯಾದ ತನ್ನ ಮಾತೃ ಸಂಸ್ಥೆ ಟಾಟಾ ಸಮೂಹಕ್ಕೆ ಮರಳಿ ಬಂದ ಸುದ್ದಿ ಎಲ್ಲೆಡೆ ವ್ಯಾಪಿಸುತ್ತಲೇ, ದೇಶದ ಹೆಮ್ಮೆಯ ಟಾಟಾ ಸನ್ಸ್ ಬಳಗಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಮಹೀಂದ್ರಾ ಸಮೂಹದ ಚೇರ್ಮನ್ ಆನಂದ್ ಮಹೀಂದ್ರಾ ಅಭಿನಂದನೆ ಸಲ್ಲಿಸಿದ ಮುಂಚೂಣಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, “ಮಹೀಂದ್ರಾ ಸಮೂಹದ ನಾವು ಟಾಟಾ ಸಮೂಹ ಮತ್ತು ಇಡಿಯ ಏರ್ ಇಂಡಿಯಾ ಕುಟುಂಬಕ್ಕೆ ಈ ಮೈಲುಗಲ್ಲು ಸ್ಥಾಪಿಸಿದ ವಿಚಾರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ದೇಶದ ಪರಂಪರೆಯ ಭಾಗವಾಗಿದೆ ಏರ್ ಇಂಡಿಯಾ. ಇದರ ಹಿಂದಿನ ವೈಭವವನ್ನು ಮರಳಿ ತರಲು ಇದಕ್ಕಿಂತ ಉತ್ತಮವಾದ ಪೋಷಕ ಸಂಸ್ಥೆ ಇರಲು ಸಾಧ್ಯವಿಲ್ಲ,” ಎಂದು ಟ್ವೀಟ್ ಮಾಡಿದ್ದಾರೆ.
Airtel ಗ್ರಾಹಕರಿಗೆ ಭರ್ಜರಿ ಸುದ್ದಿ: ಗೂಗಲ್ ನಿಂದ ಭಾರ್ತಿ ಏರ್ ಟೆಲ್ ನಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ
ಇದೇ ವೇಳೆ, ಸ್ನ್ಯಾಪ್‌ಡೀಲ್ ಸಿಇಓ ಕುನಾಲ್ ಬಾಹ್ಲ್ ಸಹ ಪ್ರತಿಕ್ರಿಯಿಸಿದ್ದು, “ಏರ್ ಇಂಡಿಯಾ ಮಾಲೀಕತ್ವ ಹೊಂದುವ ಜೊತೆಗೆ ಟಾಟಾ ಸಮೂಹ ಈ ಸಂಸ್ಥೆಯನ್ನು ಮುನ್ನಡೆಸುವುದರಲ್ಲಿ ಏನೋ ಒಂದು ಬಂಧವಿದೆ. ನಮ್ಮ ರಾಷ್ಟ್ರೀಯ ವಾಹಕವನ್ನು ಅವರು ನಿಸ್ಸಂಶಯವಾಗಿಯೂ ಮುನ್ನಡೆಸುತ್ತಾ ಹೊಸ ಎತ್ತರಗಳಿಗೆ ಕೊಂಡೊಯ್ಯಲು ಟಾಟಾ ಸಮೂಹ ಅರ್ಹವಾಗಿದೆ,” ಎಂದಿದ್ದಾರೆ.
ಇದೇ ವೇಳೆ ವಿಮಾನಯಾನ ಕ್ಷೇತ್ರದ ಸಹ ಆಟಗಾರರಾದ ಇಂಡಿಗೋ ಹಾಗೂ ಟಾಟಾ-ಸಿಂಗಾಪುರ ಏರ್‌ಲೈನ್ಸ್ ಬೆಂಬಲಿತ ವಿಸ್ತಾರಾ ಸಹ ಏರ್ ಇಂಡಿಯಾ ಮತ್ತು ಟಾಟಾ ಸಮೂಹಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
“ಅಭಿನಂದನೆಗಳು ಏರ್ ಇಂಡಿಯಾ ! ಟಾಟಾ ಸಮೂಹದ ಭಾಗವಾಗಿ ಹೊಸ ಇನಿಂಗ್ಸ್ ಆರಂಭಿಸುತ್ತಿರುವ ನಿಮಗೆ ಸರ್ವ ಋತುಮಾನದಲ್ಲೂ ಉತ್ತಮ ಭೂಸ್ಪರ್ಶವಾಗಲೆಂದು ಹಾರೈಸುತ್ತೇವೆ,” ಎಂದು ವಿಸ್ತಾರಾ ಟ್ವೀಟ್ ಮಾಡಿದೆ.
“ಮನೆಗೆ ಮರಳಿದ್ದು ಎಷ್ಟು ಸೊಗಸಾಗಿದೆ ! ಅಭಿನಂದನೆಗಳು ಏರ್ ಇಂಡಯಾ ಮತ್ತು ಟಾಟಾ ಸಮೂಹಕ್ಕೆ, ಇಲ್ಲಿ ಭವಿಷ್ಯದಲ್ಲಿ ಎತ್ತರಕ್ಕೇಲು,” ಎಂದು ಇಂಡಿಗೂ ಟ್ವೀಟ್ ಮಾಡಿದೆ.