ನವದೆಹಲಿ: ಮಹೀಂದ್ರಾ & ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದು, ಹಾಸ್ಯದ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾಗಿದ್ದಾರೆ. ಈ ಬಾರಿ ತಮ್ಮ ಹಾಸ್ಯಕ್ಕೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿಕೊಂಡಿದ್ದಾರೆ.
‘ಬ್ಯಾಕ್ ಟು ದಿ ಫ್ಯೂಚರ್’ ಶೀರ್ಷಿಕೆಯಡಿ, “ಗೂಗಲ್ ಮ್ಯಾಪ್ ಅಗತ್ಯವಿಲ್ಲ, ಖರೀದಿಸಲು ಇಂಧನ ಬೇಕಾಗಿಲ್ಲ, ಮಾಲಿನ್ಯವಿಲ್ಲ, ಸಂಪೂರ್ಣವಾಗಿ ಸ್ವಯಂ ಚಾಲಿತ…… ವಿಶ್ರಾಂತಿ ಪಡೆಯಿರಿ, ನಿದ್ದೆ ಮಾಡಿ, ನಿಮ್ಮ ಗಮ್ಯಸ್ಥಾನವನ್ನು ತಲುಪಿ” ಎಂದು ಟ್ವೀಟ್ ಮಾಡಿದ್ದು, ಈ ಪೋಸ್ಟ್ ಗೆ ಎಲಾನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿ ಚಾಲಕ ರಹಿತ ಕಾರುಗಳ ಉತ್ಪಾದನೆಯಲ್ಲಿ ತೊಡಗಿರುವುದರಿಂದ ನಮಗೆ ಈ ಟೆಕ್ನಾಲಜಿ ಈ ಹಿಂದೆಯೇ ತಿಳಿದಿತ್ತು ಎಂಬರ್ಥದಲ್ಲಿ ಆನಂದ್ ಮಹೀಂದ್ರಾ ಪೋಸ್ಟ್ ಮಾಡಿದ್ದಾರೆ.
ಆನಂದ್ ಮಹೀಂದ್ರಾ ಅವರು ಪೋಸ್ಟ್ ಮಾಡಿದ 22 ಗಂಟೆಗಳಲ್ಲಿ ಪೋಸ್ಟ್ 143 ಸಾವಿರ ಲೈಕ್‌ಗಳು, 16,000 ರೀಟ್ವೀಟ್ ಗಳು ಮತ್ತು 3000ಕ್ಕೂ ಹೆಚ್ಚು ಕಾಮೆಂಟ್ ಗಳನ್ನು ಗಳಿಸಿದೆ.
ಆನಂದ್ ಮಹೀಂದ್ರಾ ಅವರು ಎಲಾನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿರುವುದು ಇದೇ ಮೊದಲಲ್ಲ. ಡಿಸೆಂಬರ್ 2020 ರ ಟ್ವೀಟ್ ನಲ್ಲಿ, “ಈ ನವೀಕರಿಸಬಹುದಾದ ಇಂಧನ ಕಾರು ಕಡಿಮೆ ಬೆಲೆಗೆ @elonmusk ಮತ್ತು Tesla ಹೊಂದಿಕೆಯಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಕಾಲೆಳೆದಿದ್ದರು.
ಇನ್ನು ಸೆಪ್ಟೆಂಬರ್ 2021ರಲ್ಲಿ, “ಉತ್ಪಾದನೆ ಕಷ್ಟ. ಧನಾತ್ಮಕ ಹಣದ ಹರಿವಿನೊಂದಿಗೆ ಉತ್ಪಾದನೆಯು ಅತ್ಯಂತ ಕಠಿಣವಾಗಿದೆ ಎಂದು ಹೇಳಿದ್ದ ಎಲಾನ್ ಮಸ್ಕ್ ಅವರಿಗೆ ಮಹೀಂದ್ರಾ, “ನೀವು ಅದನ್ನು ಹೇಳಿದ್ದೀರಿ, @elonmusk ಮತ್ತು ನಾವು ದಶಕಗಳಿಂದ ಅದನ್ನು ಮಾಡುತ್ತಿದ್ದೇವೆ. ಇನ್ನೂ ಬೆವರುವುದು ಮತ್ತು ಅದರ ಗುಲಾಮಗಿರಿ. ಇದು ನಮ್ಮ ಜೀವನ ವಿಧಾನ ಎಂದು ಹೇಳಿದ್ದರು.