alex Certify ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಟೀ ಶರ್ಟ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ; ಇಲ್ಲಿದೆ ಅದರ ವಿಶೇಷತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಟೀ ಶರ್ಟ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ; ಇಲ್ಲಿದೆ ಅದರ ವಿಶೇಷತೆ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೊಸ ಆವಿಷ್ಕಾರಗಳು, ಸ್ಪೂರ್ತಿದಾಯಕ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಇದೀಗ, ವಿಶೇಷವಾಗಿ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಅತ್ಯಂತ ವಿಶಿಷ್ಟವಾದ ಟಿ-ಶರ್ಟ್ ಕುರಿತು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಟೀ ಶರ್ಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವ್ಯಕ್ತಿಯೊಬ್ಬರು ಪ್ರದರ್ಶಿಸಿದ್ದಾರೆ.

ಇದು ನೊಬೆಲ್ ಪ್ರಶಸ್ತಿಯನ್ನು ಪಡೆಯದಿರಬಹುದು. ಆದರೆ, ಇದು ನನಗೆ ಆ ಆವಿಷ್ಕಾರಗಳಿಗಿಂತ ಹೆಚ್ಚಿನ ಸ್ಥಾನದಲ್ಲಿದೆ. ಏಕೆಂದರೆ ಇಬ್ಬರು ಚಿಕ್ಕ ಮಕ್ಕಳ ಅಜ್ಜನಾಗಿ, ಅವರ ಯೋಗಕ್ಷೇಮ ಮತ್ತು ಸುರಕ್ಷತೆಯು ನನ್ನ ಹೆಚ್ಚಿನ ಆದ್ಯತೆಯಾಗಿದೆ ಎಂದು ಮಹೀಂದ್ರಾ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಈ ಪೋಸ್ಟ್ ಹಲವಾರು ವೀಕ್ಷಣೆಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಫ್ಲೋಟೀ ಎಂಬ ಫ್ರೆಂಚ್ ಕಂಪನಿಯು ವಿಶಿಷ್ಟವಾದ ಟೀ ಶರ್ಟ್ ಅನ್ನು ಅಭಿವೃದ್ಧಿಪಡಿಸಿದೆ. ಈ ಟೀ ಶರ್ಟ್ ಧರಿಸಿದ್ದರೆ, ಮಕ್ಕಳು ಒಂದು ವೇಳೆ ಆಕಸ್ಮಾತ್ ಆಗಿ ನೀರಿನಲ್ಲಿ ಬಿದ್ದರೆ ಇದು ಬಲೂನ್ ನಂತೆ ಊದಿ ಮೇಲೆ ತರುವಲ್ಲಿ ಸಹಕಾರಿಯಾಗಿದೆ. ಈ ವಿಶಿಷ್ಟವಾದ ಟೀ ಶರ್ಟ್ ಬೆಲೆ 149 ಯುರೋಗೆ (ಅಂದಾಜು ರೂ. 13,000).

ಸದ್ಯ, ಈ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ವಿಶಿಷ್ಟ ಟೀ ಶರ್ಟ್‌ನಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ. ಇದು ಪೋಷಕರಿಗೆ ಕೊಂಚ ನೆಮ್ಮದಿ ನೀಡಲಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...