ಸಂಚಾರಕ್ಕಾಗಿ ಕಷ್ಟಪಡುವ ದಿವ್ಯಾಂಗರಿಗೆ ವರದಾನ ಆಗಬಲ್ಲ, ವಿಶಿಷ್ಟ ಮೋಟಾರ್ ಸೈಕಲ್ ವ್ಹೀಲ್‍ಚೇರ್ ಅನ್ವೇಷಣೆ ಮತ್ತು ಅದರ ಬಳಕೆಯ ವಿಡಿಯೊವೊಂದನ್ನು ಮಹೀಂದ್ರಾ ಕಂಪನಿ ಮಾಲೀಕ ಆನಂದ್ ಮಹೀಂದ್ರಾ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಅವರ ಫಾಲೋವರ್ಸ್‍ಗಳ ಹುಬ್ಬೇರುವಂತೆ ಮಾಡಿದೆ.
ವ್ಹೀಲ್‍ಚೇರ್ನ ನ ನಾಲ್ಕು ಚಕ್ರಗಳನ್ನು ಎಳೆಯಲು ಮತ್ತು ಚಾಲಕ ಬ್ಯಾಲೆನ್ಸ್ ಮಾಡಲು ಅಗತ್ಯ ಒಂದು ಹ್ಯಾಂಡಲ್ ಅನ್ನು ಸಿದ್ಧಪಡಿಸಲಾಗಿದೆ. ಈ ಹ್ಯಾಂಡಲ್ ಮುಂಭಾಗದಲ್ಲಿ ಇಂದು ಸ್ಕೂಟರ್ ನ ಟೈರ್ ಜತೆಗೆ ಎಲೆಕ್ಟ್ರಿಕ್ ಮೋಟಾರ್ ಇದೆ.
ರಕ್ಷಾಬಂಧನದ ಮುನ್ನಾದಿನ ಮರೆಯಲಾಗದ ಉಡುಗೊರೆ ಕೊಟ್ಟ ಸಹೋದರ
ಈ ಹ್ಯಾಂಡಲ್ ಅನ್ನು ವ್ಹೀಲ್‍ಚೇರ್‍ಗೆ ಲಾಕ್ ಮಾಡಲು ಎರಡೂ ಬದಿಯಲ್ಲಿ ಸುಲಭ ವ್ಯವಸ್ಥೆಯ ಜಾಯಿಂಟ್ ನೀಡಲಾಗಿದೆ. ಅಷ್ಟೇ, ಜಾಯಿಂಟ್ ಮಾಡಿಕೊಂಡು, ಹ್ಯಾಂಡಲ್ ನಲ್ಲಿನ ಮೋಟಾರ್ ಶುರು ಮಾಡಿಕೊಂಡರೇ, ವ್ಹೀಲ್‍ಚೇರ್ ಒಂದು ಮೋಟಾರ್ ಸೈಕಲ್ ಅಥವಾ ಮೊಪೆಡ್ ಆಗಲಿದೆ.
ಈ ವಿಶೇಷ ಆವಿಷ್ಕಾರವನ್ನು ಐಐಟಿ ಮದ್ರಾಸ್‍ನ ಸ್ಟಾರ್ಟ್‍ಅಪ್ ಮಾಡಿದ್ದು, ಆನಂದ್ ಅವರು ನೆರವಿನ ಭರವಸೆ ಕೊಟ್ಟಿದ್ದಾರೆ.