ಆನಂದ್ ಮಹೀಂದ್ರಾ ಮತ್ತೊಮ್ಮೆ ತಮ್ಮ ಅನುಯಾಯಿಗಳನ್ನು ದಿಗ್ಭ್ರಮೆಗೊಳಿಸಿದ್ದಾರೆ. ಸದಾ ಒಂದಿಲ್ಲೊಂದು ಕುತೂಹಲದ ವಿಡಿಯೋ ಶೇರ್ ಮಾಡಿಕೊಳ್ಳುವ ಆನಂದ್ ಮಹೀಂದ್ರ ಅವರು ಈ ಬಾರಿ ಭಿನ್ನವಾಗಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ.
ಕೈಗಾರಿಕೋದ್ಯಮಿ ಹಂಚಿಕೊಂಡ ವೀಡಿಯೊದಲ್ಲಿ, ಆಸ್ಟ್ರೇಲಿಯಾದ ಸಂಗೀತಗಾರರೊಬ್ಬರು ಕ್ಯಾರೆಟ್ ಅನ್ನು ಕ್ಲಾರಿನೆಟ್ ಆಗಿ ಪರಿವರ್ತಿಸಿದ್ದನ್ನು ನೋಡಬಹುದು. ಕ್ಯಾರೆಟ್‌ನಿಂದ ಅದ್ಭುತವಾಗಿ ಸಂಗೀತವನ್ನು ನುಡಿಸಿದ್ದಾರೆ. ವೀಡಿಯೊವನ್ನು ಹಂಚಿಕೊಳ್ಳುವಾಗ, ಮಹೀಂದ್ರಾ ಎಲ್ಲದರಲ್ಲೂ ಸಂಗೀತವನ್ನು ಹುಡುಕಿ ಎಂದು ನೆಟ್ಟಿಗರಿಗೆ ಹೇಳಿದ್ದಾರೆ.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಆನಂದ್ ಮಹೀಂದ್ರಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 2-ನಿಮಿಷದ ವಿಡಿಯೋದಲ್ಲಿ ಲಿನ್ಸೆ ಪೊಲಾಕ್ ಎಂಬ ಆಸ್ಟ್ರೇಲಿಯಾದ ಸಂಗೀತಗಾರ ಕ್ಯಾರೆಟ್ ಅನ್ನು ಕ್ಲಾರಿನೆಟ್ ಆಗಿ ಪರಿವರ್ತಿಸಿದ್ದನ್ನು ನೋಡಬಹುದು. ಅವರು ಕ್ಯಾರೆಟ್ನಲ್ಲಿ ಕೆಲವು ರಂಧ್ರಗಳನ್ನು ಕೊರೆದು ಅದನ್ನು ಚೂಪಾದ, ಸಿಲಿಂಡರಾಕಾರದ ಆಕಾರಕ್ಕೆ ತಿರುಗಿಸಿದರು. ನಂತರ ಅವರು ಕೆಳಭಾಗದಲ್ಲಿ ಫನಲ್ ಅಳವಡಿಸಿ ಸಂಗೀತ ನುಡಿಸಿದ್ದಾರೆ.