
ಆಗಿಂದಾಗ್ಗೆ ಜಾಲತಾಣದಲ್ಲಿ ಪೋಸ್ಟ್ ಮತ್ತು ವಿಡಿಯೋಗಳನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಅವರು 9 ಮಿಲಿಯನ್ ಫಾಲೋಯರ್‌ಗಳನ್ನು ಹೊಂದಿದ್ದಾರೆ.
ಅವರೀಗ ಹಂಚಿಕೊಂಡ ಡಿಸ್ಕೋ ಸ್ಕೂಟರ್ ವಿಡಿಯೋಗೆ “ಜೀವನವು ನೀವು ಬಯಸಿದಷ್ಟು ವರ್ಣರಂಜಿತ ಮತ್ತು ಮನರಂಜನೆಯಾಗಿರಬಹುದು…… ಭಾರತದಲ್ಲಿ ಮಾತ್ರ” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ವಿಡಿಯೊ 298ಕೆ ವೀಕ್ಷಣೆ ಕಂಡಿದ್ದು, 15 ಸಾವಿರ ಲೈಕ್ ಪಡೆದಿದೆ.
ಕಸ್ಟಮೈಸ್ ಮಾಡಿದ ಸ್ಕೂಟರ್ ಮುಂಭಾಗದಲ್ಲಿ ಚಿಕ್ಕ ಟಿವಿ ಕೂಡ ಇದೆ, ವಾಹನವು ಸಂಪೂರ್ಣವಾಗಿ ಜಗಮಗಿಸುವ ಲೈಟ್‌ನಿಂದ ಅಲಂಕರಿಸಲಾಗಿದೆ. ಹೊಳೆಯುವ ಮಣಿಗಳಿಂದ ಕಂಗೊಳಿಸುತ್ತಿದ್ದು, ಜಗಮಗಿಸುವಂತಿದೆ.