ಕಳೆದ ಒಂದು ಶತಮಾನದಿಂದ ಹಣದುಬ್ಬರ ಯಾವ ಮಟ್ಟಿಗೆ ಏರಿದೆ ಎಂದು ಐಡಿಯಾ ಕೊಡುವ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿರುವ ಮಹಿಂದ್ರಾ & ಮಹಿಂದ್ರಾದ ಚೇರ್ಮನ್ ಆನಂದ್ ಮಹಿಂದ್ರಾ, 1903ರಲ್ಲಿ ತಾಜ್ ಮಹಲ್ ಪ್ಯಾಲೇಸ್ ಹೊಟೇಲ್‌ನಲ್ಲಿ ತಂಗಲು ಎಷ್ಟು ದುಡ್ಡು ಖರ್ಚಾಗುತ್ತಿತ್ತು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.
ಡಿಸೆಂಬರ್ 1, 1903ರಲ್ಲಿ ಬಾಂಬೆಯ ತಾಜ್ ಮಹಲ್ ಪ್ಯಾಲೇಸ್ ಹೊಟೇಲ್‌ನ ಲಕ್ಸುರಿ ಕೋಣೆಯಲ್ಲಿ ತಂಗಲು 6 ರೂಪಾಯಿ ಖರ್ಚಾಗುತ್ತಿತ್ತು ಎಂದು ತೋರುವ ರಶೀದಿ ಒಂದರ ಚಿತ್ರವನ್ನು ಹಂಚಿಕೊಂಡಿರುವ ಆನಂದ್ ಮಹಿಂದ್ರಾ, “ಹಣದುಬ್ಬರವನ್ನು ಬೀಟ್ ಮಾಡಲು ಇಲ್ಲೊಂದು ಹಾದಿ ಇದೆ. ಸಮಯದ ಮಶೀನ್ ಏರಿಕೊಂಡು ಒಂದಷ್ಟು ದಿನ ಹಿಂದಕ್ಕೆ ಹೋಗಿ. ತಾಜ್, ಮುಂಬಯಿಯಲ್ಲಿ ಒಂದು ರಾತ್ರಿ ತಂಗಲು ಆರು ರೂಪಾಯಿ? ಅವು ಆ ದಿನಗಳು…..” ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಭರ್ಜರಿ ಗುಡ್ ನ್ಯೂಸ್: ವಾಟ್ಸಾಪ್ ನಲ್ಲಿ ಸೆಕೆಂಡ್ ನೊಳಗೆ ಸಿಗುತ್ತೆ ‘ಕೋವಿಡ್ ಪ್ರಮಾಣಪತ್ರ’
ಇದಕ್ಕೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, “1903ರ ಆರಂಭದಲ್ಲಿ ಅಟ್ಯಾಚ್ ಬಾತ್‌ರೂಂಗಳು ಹಾಗೂ ಫ್ಯಾನ್‌ಗಳಿದ್ದ ಕೋಣೆಗಳಿಗೆ 13 ರೂಪಾಯಿ ಚಾರ್ಜ್ ಮಾಡಲಾಗುತ್ತಿತ್ತು ಫುಲ್ ಬೋರ್ಡ್‌ಗೆ 20 ರೂಪಾಯಿಗಳಿದ್ದವು. ಮೊದಲನೇ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಹೊಟೇಲ್ ಅನ್ನು 600 ಹಾಸಿಗೆಗಳ ಮಿಲಿಟರಿ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿತ್ತು. ತಾಜ್ ಮಹಲ್ ಪ್ಯಾಲೇಸ್‌ನಲ್ಲಿ 6 ಫ್ಲೋರ್‌ಗಳಿವೆ, ತಾಜ್ ಮಹಲ್ ಟವರ್‌ನಲ್ಲಿ 20 ಅಂತಸ್ತುಗಳಿವೆ” ಎಂದು ಅಂದು ಹಾಗೂ ಇಂದಿನ ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದಾರೆ.