ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಮಹಿಂದ್ರಾ ಅಂಡ್ ಮಹಿಂದ್ರಾ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ ಟ್ವಿಟರ್‌ನಲ್ಲಿ ತಮ್ಮ ಅನುಯಾಯಿಗಳ ಬಳಗದೊಂದಿಗೆ ಬಹಳ ಆಸಕ್ತಿಕರ ಸಂಗತಿಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಯುವ ಪ್ರತಿಭೆಗಳನ್ನು ಪ್ರಮೋಟ್ ಮಾಡುವುದು, ಜನಸಾಮಾನ್ಯರ ಅನ್ವೇಷಣೆಗಳನ್ನು ಹೈಲೈಟ್ ಮಾಡಿ ತೋರುವುದು, ಮಾಹಿತ ತಂತ್ರಜ್ಞಾನದ ತುಣುಕುಗಳನ್ನು ಶೇರ್ ಮಾಡುವುದನ್ನು ಇಷ್ಟಪಡುವ 66 ವರ್ಷದ ಉದ್ಯಮಿ ಇತ್ತೀಚೆಗೆ ತಮ್ಮನ್ನು ಕೋಟ್ ಮಾಡಿ ಹಾಕಲಾದ ವಿಚಾರವೊಂದನ್ನು ಅಲ್ಲಗಳೆದಿದ್ದಾರೆ.
ಮರಣೋತ್ತರ ಪರೀಕ್ಷೆಗೆ ಮೊದಲು ಬದುಕಿ ಬಂದ ಶವಾಗಾರದಲ್ಲಿದ್ದ ವ್ಯಕ್ತಿ
ಇನ್‌ಸ್ಟಾಗ್ರಾಂನಲ್ಲಿ ಮಹಿಂದ್ರಾರ ಫೋಟೋ ಹಾಗೂ ಹೆಸರು ಹಾಕಿ, “ದೇಶದ ಸರಾಸರಿ ಮಾನವನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರನ್ನು ಫಾಲೋ ಮಾಡುತ್ತಾ, ಕ್ರೀಡಾ ತಂಡಗಳ ಮೇಲೆ ತನ್ನ ನಂಬಿಕೆ ಖರ್ಚು ಮಾಡುತ್ತಾ ಹಾಗೂ ತನ್ನನ್ನು ಕೇರ್ ಮಾಡದ ರಾಜಕಾರಣಿಗಳ ಕೈಯಲ್ಲಿ ತನ್ನ ಕನಸುಗಳನ್ನು ಬಿಟ್ಟು ತನ್ನ ದಿನವನ್ನು ಕಳೆಯುತ್ತಾನೆ,” ಎಂದು ಹಾಕಲಾಗಿತ್ತು.
ಗುಡ್ ನ್ಯೂಸ್: ರೈತರಿಗೆ ಸ್ಮಾರ್ಟ್ಫೋನ್ ಖರೀದಿಗೆ ಹಣ ನೀಡಲು ನಿರ್ಧಾರ, ಅನ್ನದಾತರಿಗೆ ಗುಜರಾತ್ ಸರ್ಕಾರದ ಕೊಡುಗೆ
ತಾನು ಹೀಗೆ ಹೇಳಿಯೇ ಇಲ್ಲವೆಂದ ಮಹಿಂದ್ರಾ, ಭವಿಷ್ಯದಲ್ಲಿ ಇಂಥ ಕೆಲಸಗಳನ್ನು ಮಾಡುವ ಮಂದಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
“ನನಗೆ ಒಬ್ಬ ಸಹೋದ್ಯೋಗಿ ಹೇಳಿದಂತೆ: ಅಂತರ್ಜಾಲದಲ್ಲಿ ಕಿಡಿಗೇಡಿಗಳ ಕಣ್ಣು ನಿಮ್ಮನ್ನು ಬೇಟೆಯಾಡಲು ಆರಂಭಿಸಿದೆ ಎನಿಸುತ್ತದೆ. ಸಂಪೂರ್ಣ ಕಾಲ್ಪನಿಕ ಕೋಟ್ ಒಂದನ್ನು ನನಗೆ ಲಗತ್ತಿಸಲಾಗಿದೆ. ನಾನು ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತೇನೆ. ಇದೇ ವೇಳೆ, ನಕಲಿ ಪೋಸ್ಟ್‌ಗಳನ್ನು ಕಂಡಾಗೆಲ್ಲಾ ನಾನು ಎರಡು ಮೀಮ್‌ಗಳನ್ನು ಬಲದಲ್ಲಿ ಪೋಸ್ಟ್ ಮಾಡಲಿದ್ದೇನೆ,” ಎಂದು ಆನಂದ್ ಮಹಿಂದ್ರಾ ಟ್ವೀಟ್ ಮಾಡಿದ್ದಾರೆ.
ಮಹಿಂದ್ರಾ ಟ್ವೀಟ್ ಮಾಡಿರುವ ಮೀಮ್‌ಗಳಲ್ಲಿ ಮೊದಲ ಮೀಮ್‌ನಲ್ಲಿ, “ನಾನು ಅದನ್ನು ಹೇಳಿಲ್ಲ,” ಎಂದು ಮಹಿಂದ್ರಾ ಹೇಳುವಂತೆ ಇದ್ದು, ಇದಕ್ಕೆ ಜಾಲಿ ಎಲ್‌ಎಲ್‌ಬಿ ಚಿತ್ರದಲ್ಲಿ ಅರ್ಶದ್ ವಾರ್ಸಿ, “ಯಾರಪ್ಪಾ ಈ ಜನ? ಎಲ್ಲಿಂದ ಬರುತ್ತಾರೆ?” ಎಂದು ಹೇಳುತ್ತಿರುವ ದೃಶ್ಯವನ್ನು ಎರಡನೇ ಮೀಮ್‌ನಲ್ಲಿ ತೋರಿದ್ದಾರೆ.