ಅಂತರಾಷ್ಟ್ರೀಯ ಫ್ರೆಂಡ್ ಶಿಪ್ ಡೇ ಸಮಯದಲ್ಲಿ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ನಿಜವಾದ ಸ್ನೇಹವನ್ನು ಸಾರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅವರ ವಿಡಿಯೋ ಲಕ್ಷಾಂತರ ಜನರ ಮನ ಮುಟ್ಟಿದೆ. ಮಹೀಂದ್ರಾ ಹಂಚಿಕೊಂಡಿರುವ ಕ್ಲಿಪ್‌ನಲ್ಲಿ, ಒಬ್ಬ ಚಿಕ್ಕ ಹುಡುಗ ಅಳುತ್ತಿದ್ದಾನೆ. ಆತನನ್ನು ನಿಷ್ಠಾವಂತ ನಾಯಿ ಸಮಾಧಾನಪಡಿಸುವ ಪ್ರಯತ್ನ ನಡೆಸುತ್ತಿದೆ.
39 ಸೆಕೆಂಡುಗಳ ಕ್ಲಿಪ್‌ನಲ್ಲಿ, ಒಬ್ಬ ಚಿಕ್ಕ ಹುಡುಗ ನೆಲದ ಮೇಲೆ ಕುಳಿತಿದ್ದಾನೆ. ಅವನು ಅಳ್ತಿದ್ದಾನೆ. ಅವನ ಬಳಿ ಬರುವ ನಾಯಿ ಹುಡುಗನ ದುಃಖದ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ನಂತರ ಸ್ವಲ್ಪ ದೂರದಲ್ಲಿದ್ದ ಟಿಶ್ಯು ತಂದು ಆತನಿಗೆ ನೀಡುತ್ತದೆ. ಹುಡುಗ ಅದ್ರಲ್ಲಿ ಕಣ್ಣೊರೆಸಿಕೊಳ್ತಾನೆ. ಹುಡುಗನನ್ನು ಸಮಾಧಾನಪಡಿಸಲು ನಾಯಿ ಪ್ರಯತ್ನಿಸುತ್ತಿದೆ ಎಂಬುದು ಇದ್ರಿಂದ ಸ್ಪಷ್ಟವಾಗುತ್ತದೆ. ನಂತ್ರ ಹುಡುಗ ಆ ನಾಯಿಯನ್ನು ಅಪ್ಪಿಕೊಳ್ತಾನೆ.
ಆನಂದ್ ಮಹೀಂದ್ರಾ “ನೀವು ಸ್ನೇಹಿತರನ್ನು ಹೊಂದಿರುವಾಗ ನೀವು ಎಂದಿಗೂ ಒಬ್ಬಂಟಿಯಾಗಿ ಅಳುವುದಿಲ್ಲ” ಎಂದು ಶೀರ್ಷಿಕೆ ಹಾಕಿದ್ದಾರೆ. ಆನಂದ್ ಮಹೀಂದ್ರಾ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋಕ್ಕೆ ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ.