
ಅಮೆರಿಕಾದ ರೋಡ್ ಪ್ಯಾಚ್ ಎಂಬ ಯುಎಸ್ ಮೂಲದ ಕಂಪನಿಯ ನಾವೀನ್ಯತೆಯ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಇದು ಒಂಥರಾ ಅಂಟು ಪ್ಯಾಚ್ ಆಗಿದ್ದು ಅದು ತಕ್ಷಣವೇ ಗುಂಡಿಗಳನ್ನು ಮುಚ್ಚುತ್ತದೆ. ಈ ಉತ್ಪನ್ನವು ಭಾರತಕ್ಕೆ ಅತ್ಯಗತ್ಯವಾಗಿದೆ ಅಂತಾ ಕೈಗಾರಿಕೋದ್ಯಮಿ ತಿಳಿಸಿದ್ದಾರೆ.
ಅಮೆರಿಕಾದ ರೋಡ್ ಪ್ಯಾಚ್‌ನ ವಿಡಿಯೋವನ್ನು ಆನಂದ್ ಮಹೀಂದ್ರಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. 2 ನಿಮಿಷದ ವಿಡಿಯೋದಲ್ಲಿ, ಕಾರ್ಮಿಕರು ಅಂಟು ಪ್ಯಾಚ್‌ನಿಂದ ಗುಂಡಿಗಳನ್ನು ಮುಚ್ಚುವುದನ್ನು ನೋಡಬಹುದು. ಇದು ಉತ್ತಮ ಗುಣಮಟ್ಟದ ಆಸ್ಫಾಲ್ಟ್, ಪಾಲಿಮರ್ ಮತ್ತು ಜಿಯೋ-ಸಿಂಥೆಟಿಕ್ ಫೈಬರ್ಗ್ಲಾಸ್ ಸಂಯೋಜನೆಯಿಂದ ತಯಾರಿಸಲ್ಪಟ್ಟಿದೆ. ರಸ್ತೆಗಳಲ್ಲಿ ಇದನ್ನು ಪ್ಯಾಚ್ ಮಾಡಿದಾಗ, ಇದು ಗುಂಡಿಗಳು ಮತ್ತು ಬಿರುಕುಗಳನ್ನು ಮುಚ್ಚಲು ಜಲನಿರೋಧಕ ಸೀಲ್ ಆಗಿ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ.
ಇದು ಭಾರತಕ್ಕೆ ಅತ್ಯಗತ್ಯವಾಗಿದೆ ಅಂತಾನೇ ಹೇಳಬಹುದು. ಕೆಲವು ಕಟ್ಟಡ/ನಿರ್ಮಾಣ ಸಾಮಗ್ರಿ ಕಂಪನಿಯು ಇದನ್ನು ಅನುಕರಿಸಬೇಕು ಅಥವಾ ಈ ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ಆನಂದ್ ಮಹೀಂದ್ರಾ ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೋ ಸುಮಾರು 7 ಲಕ್ಷ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಇದು ನೆಟ್ಟಿಗರಿಂದ ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಸಹ ಗಳಿಸಿದೆ.
ಇನ್ನು ನೆಟ್ಟಿಗರಲ್ಲಿ ಬಹುತೇಕರು ಮಹೀಂದ್ರಾ ಅವರ ಮಾತಿಗೆ ಸಹಮತ ಸೂಚಿಸಿಲ್ಲ. ಇವೆಲ್ಲಾ ಕೇವಲ ತಾತ್ಕಾಲಿಕ ಪರಿಹಾರಗಳಾಗಿವೆ. ಭಾರತದ ರಸ್ತೆಗಳಿಗೆ ಇವು ದೀರ್ಘಕಾಲ ಉಳಿಯುತ್ತದೆ ಎಂದು ಊಹಿಸಲು ಕಷ್ಟ ಅಂತಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
https://twitter.com/kkronline/status/1554675904621969408?ref_src=twsrc%5Etfw%7Ctwcamp%5Etweetembed%7Ctwterm%5E1554675904621969408%7Ctwgr%5E00dd2770aa0cf362fe7707de22267e72f2a98389%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fanand-mahindra-says-this-product-is-essential-for-india-in-viral-video-not-sure-says-internet-1983832-2022-08-04