ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಪೋಸ್ಟ್ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಜುಲೆ 21 ರಂದು ಅವರು ರಿಟ್ವೀಟ್ ಮಾಡಿದ ಪೋಸ್ಟ್ ವಿಶೇಷ ಫೋಟೋ ಜೊತೆಗೆ ಚಿಂತನಾ ಪ್ರಚೋದಕ ಶೀರ್ಷಿಕೆ ನೀಡಿದ್ದಾರೆ.
ಮಂಗಳ ಗ್ರಹದಿಂದ ತೆಗೆದ ಭೂಮಿಯ ಚಿತ್ರವನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ. ಗ್ರೇ ಕಲರ್ನ ವಿಸ್ತಾರವಾದ ಪ್ರದೇಶದಲ್ಲಿ ಭೂಮಿ ಸಣ್ಣ ಚುಕ್ಕೆಯಂತೆ ಗೋಚರಿಸುತ್ತದೆ. “ಈ ಅದ್ಭುತ ಫೋಟೋವನ್ನು ವಾಸ್ತವವಾಗಿ ಮಂಗಳ ಗ್ರಹದಿಂದ ತೆಗೆಯಲಾಗಿದೆ. ಹೌದು, ಆ ಚಿಕ್ಕ ನಕ್ಷತ್ರದಂತಹ ಬಿಳಿ ಚುಕ್ಕೆ ನಮ್ಮ ಪ್ರೀತಿಯ ಭೂಮಿಯಾಗಿದೆ’ ಎಂದು ಎರಡು ಸಾಲು ಬರೆದು ಕ್ಯೂರಿಯಾಸಿಟಿ ಹೆಚ್ಚಿಸಿದ್ದಾರೆ.
“ಈ ಫೋಟೋ ನಮಗೆ ಕಲಿಸಬೇಕಾದ ಒಂದೇ ಒಂದು ವಿಷಯವಿದ್ದರೆ, ಅದು ನಮ್ರತೆ’ ಎಂದು ಅವರು ಬರೆದಿದ್ದಾರೆ.
ಈ ಪೋಸ್ಟ್ ನೆಟ್ಟಿಗರಿಂದ ಬಗೆಬಗೆಯ ಅಭಿಪ್ರಾಯಗಳನ್ನು ಪಡೆದುಕೊಂಡಿತು. ಒಬ್ಬರು, ಮಂಗಳ ಗ್ರಹವನ್ನು ಭವಿಷ್ಯದ ಪೀಳಿಗೆಗೆ “ಸೆಲ್ಫಿ ಪಾಯಿಂಟ್” ಎಂದೂ ಕರೆದಿದ್ದಾರೆ. “ಈ ಇಡೀ ವಿಶ್ವದಲ್ಲಿ ನಾವು ಕೇವಲ ಒಂದು ಸಣ್ಣ ಧೂಳಿನ ಚುಕ್ಕೆ! ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.