ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಉಪಹಾರದ ಐಟಂ ಯಾವುದು ಎಂದು ಕೇಳಿದರೆ ಬಹುಶಃ ನಮ್ಮ ನಿಮ್ಮೆಲ್ಲರ ಮನದಲ್ಲಿ ಏಕರೂಪವಾಗಿ ಮೂಡುವ ಹೆಸರು ’ಇಡ್ಲಿ’ ಎಂದರೆ ಅತಿಶಯೋಕ್ತಿ ಅಲ್ಲ ತಾನೇ?
ದಿನದ ಯಾವುದೇ ಸಂದರ್ಭದಲ್ಲೂ ಸವಿಯಬಹುದಾದ ಇಡ್ಲಿ ತನ್ನ ಮೃದುತ್ವದಿಂದ ಚಟ್ನಿ ಅಥವಾ ಸಾಂಬಾರ್‌ನೊಂದಿಗೆ ಸೇವಿಸಲು ಚಂದ. ನಮ್ಮಲ್ಲಿ ಭಾರೀ ಜನಪ್ರಿಯವಾಗಿರುವ ಇಡ್ಲಿಗಳನ್ನು ಹೋಟೆಲ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಾಡಬೇಕಾಗುತ್ತದೆ.
ಹೀಗೆ ದೊಡ್ಡ ಪ್ರಮಾಣದಲ್ಲಿ ಇಡ್ಲಿಗಳನ್ನು ತಯಾರಿಸುತ್ತಿರುವ ವಿಡಿಯೋವೊಂದನ್ನು ಉದ್ಯಮಿ ಆಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
“ಒಂದು ಕಡೆ ಇಡ್ಲಿ ಅಮ್ಮನಂಥವರು ಶ್ರಮದಿಂದ ನಿಧಾನವಾಗಿ ಇಡ್ಲಿ ತಯಾರಿಸುತ್ತಾರೆ. ಮತ್ತೊಂದು ಕಡೆ ಸಾಮೂಹಿಕ ಉತ್ಪಾದನಾ ಉಪಕರಣಗಳನ್ನು ಬಳಸಿಕೊಂಡು ಈ ಪ್ರಮಾಣದಲ್ಲಿ ಇಡ್ಲಿ ತಯಾರಿಸಲಾಗುತ್ತದೆ ! ಆದರೆ ಸದಾ ಭಾರತೀಯತೆ ಇರುವ, ಮಾನವ ಸ್ಪರ್ಶವಿರುವ ವಸ್ತುಗಳನ್ನು ಮಿಸ್ ಮಾಡಿಕೊಳ್ಳಬೇಡಿ: ಪುಟ್ಟದೊಂದು ಬ್ರೇಕ್ ಪಡೆದು ಮನೆಯ ಗೋವಿಗೆ ಇಡ್ಲಿ ನೀಡಲಾಗುತ್ತಿದೆ,” ಎಂದು ಪೋಸ್ಟ್ ಮಾಡಿದ್ದಾರೆ ಮಹಿಂದ್ರಾ.