
ಉತ್ತರಾಖಂಡ: ಕಳೆದ ಕೆಲವು ವರ್ಷಗಳಲ್ಲಿ, ವಿಶೇಷವಾಗಿ COVID-19 ಸಾಂಕ್ರಾಮಿಕ ಸಮಯದಲ್ಲಿ ಡಿಜಿಟಲ್ ಪಾವತಿಗಳು ಭಾರಿ ಬೆಳವಣಿಗೆಯನ್ನು ಕಂಡಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅಂಗಡಿಗಳು UPI ನಂತಹ ಡಿಜಿಟಲ್ ಪಾವತಿ ಆಯ್ಕೆಗಳನ್ನು ಹೊಂದಿವೆ.
ಮಾಲ್, ಥಿಯೇಟರ್, ಹೊಟೇಲ್ ಮಾತ್ರವಲ್ಲ ಸಣ್ಣಪುಟ್ಟ ಅಂಗಡಿಗಳಲ್ಲೂ ಡಿಜಿಟಲ್ ಪೇಮೆಂಟ್ ಲಭ್ಯವಿರುತ್ತದೆ. ಸದ್ಯ ಭಾರತ-ಚೀನಾ ಗಡಿಯ ಕೊನೆಯ ಟೀ ಸ್ಟಾಲ್ ಸಹ ಡಿಜಿಟಲ್ ಪಾವತಿ ಸ್ವೀಕರಿಸಲು ಸಿದ್ಧವಾಗಿದೆ. ‘ಇಂಡಿಯಾಸ್ ಲಾಸ್ಟ್ ಟೀ ಶಾಪ್’ ಯುಪಿಐ ಪಾವತಿಗಳನ್ನು ಸ್ವೀಕರಿಸುತ್ತದೆ, ‘ಜೈ ಹೋ’ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಭಾರತ- ಟಿಬೆಟ್ ಗಡಿಯಲ್ಲಿ ಉತ್ತರಾಖಂಡದಲ್ಲಿ ದೇಶದ ಕೊನೆಯ ಗ್ರಾಮವಾದ ಮಾನಾ ಇದೆ. ಇದು ದೊಡ್ಡ ಪ್ರವಾಸಿ ಕೇಂದ್ರವಾಗಿದೆ. ಪ್ರತಿವರ್ಷವೂ ಸಹಸ್ರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲೊಂದು ಚಹಾ ಅಂಗಡಿಯಿದ್ದು, ಇದನ್ನು ಭಾರತದ ಕೊನೆಯ ಚಹಾ ಅಂಗಡಿ ಎಂದೇ ಹೇಳಲಾಗುತ್ತದೆ.
ಪ್ರವಾಸಿಗರಿಗೆ ಬಿಸಿಬಿಸಿಯಾದ, ರುಚಿಕರಾದ ತುಳಸಿ ಚಹಾವನ್ನು ಇಲ್ಲಿ ನೀಡಲಾಗುತ್ತದೆ. ಇಷ್ಟು ವರ್ಷಗಳವರೆಗೆ ಕೇವಲ ಹಣವನ್ನು ಪಾವತಿಸುವ ಮೂಲಕ ಮಾತ್ರ ಟೀ ಕುಡಿಯಬೇಕಿತ್ತು. ಆದರೆ ಇಲ್ಲಿಯೂ ಈಗ ಡಿಜಿಟಲ್ ಪೇಮೆಂಟ್ ಆಪ್ಶನ್ ಲಭ್ಯವಾಗಿದ್ದು ಈ ಕುರಿತು ‘ಇಂಡಿಯಾಸ್ ಲಾಸ್ಟ್ ಟೀ ಶಾಪ್’ ಯುಪಿಐ ಪಾವತಿಗಳನ್ನು ಸ್ವೀಕರಿಸುತ್ತದೆ, ‘ಜೈ ಹೋ’ ಎಂದು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಯುಪಿಐ ಪಾವತಿಗಳನ್ನು ಬಳಸುವ 10,500 ಅಡಿ ಎತ್ತರದಲ್ಲಿರುವ ಉತ್ತರಾಖಂಡದ ಹಳ್ಳಿಯೊಂದರಲ್ಲಿ ನೆಲೆಗೊಂಡಿರುವ ‘ಇಂಡಿಯಾಸ್ ಲಾಸ್ಟ್ ಟೀ ಶಾಪ್’ ಫೋಟೋವನ್ನು ಮಹೀಂದ್ರಾ ರಿಟ್ವೀಟ್ ಮಾಡಿದ್ದಾರೆ. ‘ಒಂದು ಚಿತ್ರವು ಸಾವಿರ ಪದಗಳಿಗೆ ಯೋಗ್ಯವಾಗಿದೆ. ಇದು ಭಾರತದ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯ ವ್ಯಾಪ್ತಿ ಮತ್ತು ಪ್ರಮಾಣವನ್ನು ಸೆರೆಹಿಡಿಯುತ್ತದೆ. ಜೈ ಹೋ’ ಎಂಬ ಶೀರ್ಷಿಕೆಯನ್ನು ಅವರು ನೀಡಿದ್ದು, ಇದೀಗ ವೈರಲ್ ಆಗುತ್ತಿದೆ.