ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ನೀರಜ್ ಚೋಪ್ರಾಗೆ ತಮ್ಮ ಕಂಪನಿಯ ಮುಂಬರುವ ಎಸ್‌ಯುವಿ ಆದ ಎಕ್ಸ್‌ಯುವಿ700 ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಮಹಿಂದ್ರಾ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ ಮಾತು ಕೊಟ್ಟಿದ್ದಾರೆ.
ಟ್ವಿಟರ್‌ನಲ್ಲಿ ತಮ್ಮ ಅನುಯಾಯಿಯೊಬ್ಬರು ಕೊಟ್ಟ ಸಲಹೆಗೆ ಪ್ರತಿಕ್ರಿಯಿಸಿದ ಆನಂದ್, ಚಿನ್ನದ ಹುಡುಗನಿಗೆ ಎಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ.
BIG NEWS: ಭುಗಿಲೆದ್ದ ಖಾತೆ ಹಂಚಿಕೆ ಅಸಮಾಧಾನ; 2-3 ದಿನಗಳಲ್ಲಿ ಮುಂದಿನ ನಿರ್ಧಾರ ತಿಳಿಸುವೆ ಎಂದ ಸಚಿವ MTB
ಮಹಿಂದ್ರಾ & ಮಹಿಂದ್ರಾದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರೀಕರ್ ಹಾಗೂ ಕಂಪನಿಯ ಆಟೋಮೋಟಿವ್ ವಿಭಾಗದ ಸಿಇಓ ವೀಜೆಯ್ ನಕ್ರಾರನ್ನು ಟ್ಯಾಗ್ ಮಾಡಿದ ಮಹಿಂದ್ರಾ, ’ಆತನಿಗೊಂದು ಕಾರನ್ನು ರೆಡಿ ಇಡಿ ಪ್ಲೀಸ್’ ಎಂದಿದ್ದಾರೆ.