ಉದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟರ್‌ನಲ್ಲಿ ತಮ್ಮ 10.1 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದು, ಸದಾ ಪ್ರೇರಕ ವಿಡಿಯೋಗಳನ್ನು ಮತ್ತು ಸ್ಫೂರ್ತಿದಾಯಕ ಸಂದೇಶಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಈ ಬಾರಿ ಅವರು ಪತಿಯ ಮರಣದ ನಂತರ ಜೀವನೋಪಾಯಕ್ಕಾಗಿ ಆಟೋ ಓಡಿಸುವ ಪಂಜಾಬ್ ಮಹಿಳೆಯ ಸ್ಫೂರ್ತಿದಾಯಕ ಕಥೆಯನ್ನು ಹೇಳಿದ್ದಾರೆ. ಪರಮ್‌ಜಿತ್ ಕೌರ್ ಅವರ ಚಿತ್ರವನ್ನು ಹಂಚಿಕೊಂಡಿರುವ ಇವರು, ಪಂಜಾಬ್‌ನಲ್ಲಿ ಮಹೀಂದ್ರಾ ಎಲೆಕ್ಟ್ರಿಕ್ ಆಟೋ ಖರೀದಿಸಿದ ಮೊದಲ ಮಹಿಳೆಯಾಗಿದ್ದಾರೆ ಎಂದು ಹೇಳಿದ್ದಾರೆ.
ತನ್ನ ಪತಿಯನ್ನು ಕಳೆದುಕೊಂಡ ನಂತರ, ಈಕೆ, ಮಹೀಂದ್ರಾದ ಆಲ್-ಎಲೆಕ್ಟ್ರಿಕ್ ಆಟೋರಿಕ್ಷಾ ಖರೀದಿಸಿ ಹೇಗೆ ತನ್ನ ಹೆಣ್ಣುಮಕ್ಕಳನ್ನು ಬೆಳೆಸುತ್ತಿದ್ದಾರೆ ಎನ್ನುವುದನ್ನು ಆನಂದ್ ಮಹೀಂದ್ರಾ ಹೇಳಿದ್ದಾರೆ. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಲು ಸಾಧ್ಯ ಎನ್ನುವುದಕ್ಕೆ ಈಕೆಯೇ ಉದಾಹರಣೆ ಎಂದು ಅವರು ಗುಣಗಾನ ಮಾಡಿದ್ದಾರೆ. ಈಕೆಯ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.