ಸ್ಪಷ್ಟವಾಗಿ ಯಾವುದೇ ನಿಯಮ, ನಿಬಂಧನೆಗಳನ್ನು ಪೂರೈಸದ ನಾಲ್ಕು-ಚಕ್ರದ ವಾಹನ, ಆದರೂ ಈ ಆವಿಷ್ಕಾರ ಆನಂದ್ ಮಹೀಂದ್ರಾರ ಹೃದಯ ಗೆದ್ದಿದೆ. ಸ್ಕ್ರ್ಯಾಪ್ ಮೆಟಲ್ ಬಳಸಿ ವಾಹನವನ್ನು ನಿರ್ಮಿಸಿದ ಮಹಾರಾಷ್ಟ್ರದ ವ್ಯಕ್ತಿ ಹಾಗೂ ಆತನ ಆವಿಷ್ಕಾರ ಒಳಗೊಂಡ ಸಣ್ಣ ವಿಡಿಯೋ ಹಂಚಿಕೊಂಡಿರುವ ಮಹೀಂದ್ರಾ, ಕೇವಲ 60 ಸಾವಿರದಲ್ಲಿ ಇಂಥಾ ಆವಿಷ್ಕಾರ, ಇದು ನಮ್ಮ ಜನರ ಸಾಮರ್ಥ್ಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ದತ್ತಾತ್ರೇಯ ಲೋಹರ್ ತಮ್ಮ ಮಗನ ಆಸೆಯನ್ನು ಪೂರೈಸಲು ಕೇವಲ ಅರವತ್ತು ಸಾವಿರ ವೆಚ್ಚದಲ್ಲಿ ಈ ವಾಹನವನ್ನು ನಿರ್ಮಿಸಿದ್ದಾರೆ. ಈ ವಾಹನವು ಹಿಂದೆಂದೂ ನೋಡಿರದ ವೈಶಿಷ್ಟ್ಯಗಳನ್ನು ಹೊಂದಿದೆ. ನಾಲ್ಕು ಚಕ್ರದ ವಾಹನವಾದರೂ ದ್ವಿಚಕ್ರ ವಾಹನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಿಕ್-ಸ್ಟಾರ್ಟ್ ಕಾರ್ಯವಿಧಾನ ಹೊಂದಿದೆ. ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ದತ್ತಾತ್ರೇಯ ಅವರು ವಾಹನ ನಿರ್ಮಿಸಿದ ರೀತಿಯನ್ನ ವಿವರಿಸುತ್ತಾರೆ.
ಮಮತಾ ಬ್ಯಾನರ್ಜಿ ಭದ್ರತಾ ಸಿಬ್ಬಂದಿಯ ರಿವಾಲ್ವಾರ್ ಮಿಸ್ಸಿಂಗ್…!
ಈ ಬಗ್ಗೆ ಮತ್ತೊಂದು ಟ್ವೀಟ್ ಮಾಡಿದ ಆನಂದ್ ಮಹೀಂದ್ರಾ, ಈ ವಾಹನವು ನಿಯಮಗಳನ್ನು ಉಲ್ಲಂಘಿಸುತ್ತದೆ ಮತ್ತು ಸ್ಥಳೀಯ ಅಧಿಕಾರಿಗಳು ಇಂದು ಅಥವಾ ನಾಳೆ ಈ ವಾಹನ ಓಡಿಸದಂತೆ ತಡೆಯುತ್ತಾರೆ, ಹೀಗಾಗಿ ನಿಮ್ಮ ವಾಹನ ನಮಗೆ ನೀಡಿ ನಾನು ನಿಮಗೆ ಬೊಲೆರೊವನ್ನು ನೀಡುತ್ತೇನೆ ಎಂದು ಕೇಳಿದ್ದಾರೆ.
ಜೊತೆಗೆ ನಿಮ್ಮ ವಾಹನ ಮಹೀಂದ್ರಾ ರಿಸರ್ಚ್ ವ್ಯಾಲಿಯಲ್ಲಿ ಪ್ರದರ್ಶನಕ್ಕಿಡಬಹುದು. ನಿಮ್ಮಂತವರ ಆವಿಷ್ಕಾರಗಳು ನಮಗೆ ಸ್ಪೂರ್ತಿ ನೀಡುತ್ತವೆ ಎಂದಿದ್ದಾರೆ. ಸಧ್ಯ ಈ ಟ್ವೀಟ್ ವೈರಲ್ ಆಗುತ್ತಿದ್ದು ದತ್ತಾತ್ರೇಯ ಅವರ ಆವಿಷ್ಕಾರ ಹಾಗೂ ಆನಂದ್ ಮಹೀಂದ್ರಾರವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.