alex Certify ಐರನ್ ಮ್ಯಾನ್ ಸೂಟ್ ನಿರ್ಮಿಸಿದ ಮಣಿಪುರದ ವಿದ್ಯಾರ್ಥಿಗೆ ಉದ್ಯಮಿ ಆನಂದ್ ಮಹೀಂದ್ರಾ ಸಹಾಯಹಸ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐರನ್ ಮ್ಯಾನ್ ಸೂಟ್ ನಿರ್ಮಿಸಿದ ಮಣಿಪುರದ ವಿದ್ಯಾರ್ಥಿಗೆ ಉದ್ಯಮಿ ಆನಂದ್ ಮಹೀಂದ್ರಾ ಸಹಾಯಹಸ್ತ

ಸ್ಕ್ರ್ಯಾಪ್‌ನಿಂದ ಐರನ್ ಮ್ಯಾನ್ ಸೂಟ್ ಅನ್ನು ನಿರ್ಮಿಸಿರುವ ಮಣಿಪುರ ಮೂಲದ ವಿದ್ಯಾರ್ಥಿಯಿಂದ ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಪ್ರಭಾವಿತರಾಗಿದ್ದರು. ಆತನ ಶಿಕ್ಷಣದ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ಹೇಳಿದ್ದ ಅವರು ಇದೀಗ ನುಡಿದಂತೆ ನಡೆದುಕೊಂಡಿದ್ದಾರೆ.

ಈ ಹಿಂದೆ ವಿದ್ಯಾರ್ಥಿ ಪ್ರೇಮ್ ಬಗ್ಗೆ ಟ್ವೀಟ್ ಮಾಡಿದ್ದ ಉದ್ಯಮಿ, ಆತನನ್ನು ಬೆಂಬಲಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೆ ಪ್ರೇಮ್ ಹಾಗೂ ಆತನ ಒಡಹುಟ್ಟಿದವರ ಶಿಕ್ಷಣದ ಜವಾಬ್ದಾರಿಯನ್ನು ಮಹೀಂದ್ರಾ ಫೌಂಡೇಶನ್ ಹೊತ್ತುಕೊಂಡಿದೆ.

ನುಡಿದಂತೆ ನಡೆದಿರುವ ಆನಂದ್ ಮಹೀಂದ್ರಾ ಅವರು ಪ್ರೇಮ್ ನ ಇಂಜಿನಿಯರಿಂಗ್ ವ್ಯಾಸಂಗಕ್ಕೆ ಸಹಾಯ ಮಾಡಿದ್ದಾರೆ. ಅಲ್ಲದೆ ಸ್ವತಃ ಆತನನ್ನು ಮಹೀಂದ್ರಾ ವಿಶ್ವವಿದ್ಯಾಲಯದಲ್ಲಿ ಓದಿಸಲು ನೆರವಾಗಿದ್ದಾರೆ.

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಆನಂದ್ ಮಹೀಂದ್ರಾ, ಇಂಫಾಲ್‌ನ ಐರನ್‌ಮ್ಯಾನ್ ಪ್ರೇಮ್ ಗೆ, ಅವರು ಬಯಸಿದ ಇಂಜಿನಿಯರಿಂಗ್ ಶಿಕ್ಷಣವನ್ನು ಪಡೆಯಲು ನಾವು ಅವರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದೆವು. ಇದೀಗ ಅವರು ಹೈದರಾಬಾದ್‌ನ ಮಹೀಂದ್ರಾ ವಿವಿಗೆ ಆಗಮಿಸಿದ್ದಾರೆ ಎಂದು ಹಂಚಿಕೊಳ್ಳಲು ನನಗೆ ಬಹಳ ಸಂತೋಷವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಆನಂದ್ ಮಹೀಂದ್ರಾ ಅವರು ಸೆಪ್ಟೆಂಬರ್‌ನಲ್ಲಿ ಪ್ರೇಮ್ ಅವರ ಕಥೆಯನ್ನು ಮೊದಲು ಹಂಚಿಕೊಂಡಿದ್ದರು. ಯಾವುದೇ ತರಬೇತಿಯಿಲ್ಲದೆ, ಸ್ಕ್ರ್ಯಾಪ್ ವಸ್ತುಗಳನ್ನು ಬಳಸಿ ಐರನ್ ಮ್ಯಾನ್ ಸೂಟ್ ಅನ್ನು ನಿರ್ಮಿಸುವಲ್ಲಿ ಪ್ರೇಮ್ ಯಶಸ್ವಿಯಾಗಿದ್ದರು. ಇದು ಉದ್ಯಮಿ ಮಹೀಂದ್ರಾ ಹಾಗೂ ಇತರರನ್ನು ಪ್ರಭಾವಿತಗೊಳಿಸಿತ್ತು. ಪ್ರೇಮ್ ಈ ಸೂಟ್ ಧರಿಸಿರುವ ವಿಡಿಯೋವನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ.

ಪ್ರೇಮ್ ಅವರ ವಿಡಿಯೋವನ್ನು ಮೊದಲು ನಟ ಜಾವೇದ್ ಜಾಫ್ರಿ ಅವರು ಆನಂದ್ ಮಹೀಂದ್ರಾ ಅವರಿಗೆ ರವಾನಿಸಿದ್ದರು. ಇನ್ನು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಕೂಡ ಪ್ರೇಮ್ ಅವರನ್ನು ಭೇಟಿ ಮಾಡಿ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದರು.

— anand mahindra (@anandmahindra) September 30, 2021

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...