ಮಕ್ಕಳಿಗೆ ಡೇ ಕೇರ್ ಕೇಂದ್ರಗಳ ಕಾನ್ಸೆಪ್ಟ್ ಹೊಸದೇನಲ್ಲ. ಕೆಲಸಕ್ಕೆ ತೆರಳುವ ದಂಪತಿಗಳಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಈ ಡೇ ಕೇರ್‌ಗಳು ದೊಡ್ಡ ಮಟ್ಟದಲ್ಲಿ ನೆರವಾಗುತ್ತವೆ.
ಆದರೆ ನೀವು ಎಂದಾದರೂ ಗಂಡಂದಿರ ಡೇ ಕೇರ್ ಎಂದು ಕೇಳಿದ್ದೀರಾ? ಡೆನ್ಮಾರ್ಕ್‌ನ ಕೆಫೆಯೊಂದು ಹೀಗೊಂದು ವಿಶಿಷ್ಟವಾದ ಐಡಿಯಾದೊಂದಿಗೆ ಎಲ್ಲೆಡೆ ಸುದ್ದಿ ಮಾಡುತ್ತಿದೆ. ಕೋಪನ್‌ಹೇಗನ್‌ನ ಗ್ರೀನ್ ಟವರ್ಸ್‌ನಲ್ಲಿರುವ ಈ ಕೆಫೆ ತನ್ನ ಕ್ರಿಯಾಶೀಲ ನಾಮಫಲಕದ ಮೂಲಕ ನಗರದ ಜನರಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
“ನಿಮಗಾಗಿ ಒಂದಷ್ಟು ಸಮಯ ಬೇಕೇ? ವಿರಮಿಸಲು ಸ್ವಲ್ಪ ಸಮಯ ಬೇಕೇ? ಶಾಪಿಂಗ್‌ಗೆ ಹೋಗಬೇಕೇ?ನಿಮ್ಮ ಪತಿಯನ್ನು ನಮ್ಮಲ್ಲಿ ಬಿಡಿ! ನಿಮ್ಮ ಪರವಾಗಿ ನಾವು ಅವರನ್ನು ನೋಡಿಕೊಳ್ಳುತ್ತೇವೆ! ನೀವು ಅವರು ಸೇವಿಸುವ ಪಾನೀಯಗಳಿಗೆ ಮಾತ್ರ ಪಾವತಿ ಮಾಡಿ,” ಎಂದು ಭಾರೀ ಆಕರ್ಷಕವಾದ ಸಾಲುಗಳ ಕೆಫೆಯ ನಾಮಫಲಕ ಉದ್ಯಮಿ ಆನಂದ್ ಮಹಿಂದ್ರಾರನ್ನೂ ಮೆಚ್ಚುವಂತೆ ಮಾಡಿದೆ.
“ಅನ್ವೇಷಣೆ ಎಂದರೆ ಕೇವಲ ಹೊಸ ಉತ್ಪನ್ನಗಳ ಉತ್ಪಾದನೆ ಮಾತ್ರವಲ್ಲ. ಚಾಲ್ತಿಯಲ್ಲಿರುವ ಉತ್ಪನ್ನಗಳನ್ನು ಬಳಸಲು ಹೊಸ ಕಾರಣಗಳನ್ನು ಸೃಷ್ಟಿಸುವುದು ಸಹ ಅನ್ವೇಷಣೆ! ಬ್ರಿಲಿಯಂಟ್,” ಎಂದು ಕ್ಯಾಪ್ಷನ್ ಕೊಟ್ಟು ಈ ಕೆಫೆಯ ನಾಮಫಲಕದ ಚಿತ್ರ ಶೇರ್ ಮಾಡಿದ್ದಾರೆ ಆನಂದ್ ಮಹಿಂದ್ರಾ.