ಕೊಟ್ಟ ಮಾತನ್ನು ಉಳಿಸಿಕೊಂಡ ಮಹಿಂದ್ರಾ & ಮಹಿಂದ್ರಾ ಉದ್ಯಮ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ತಂದಿತ್ತ ಶೂಟರ್ ಅವಾನಿ ಲೇಖರಾಗೆ ವಿಶೇಷ ಕಾರೊಂದನ್ನು ಉಡುಗೊರೆ ನೀಡಿದ್ದಾರೆ.
ಕಾರಿನ ಒಳಗೆ-ಹೊರಗೆ ಗಾಲಿ ಕುರ್ಚಿ ಮೇಲಿಂದಲೇ ಸಲೀಸಾಗಿ ಹೋಗಿ ಬರುವಂತೆ ಡಿಸೈನ್ ಮಾಡಲಾದ ಎಕ್ಸ್‌ಯುವಿ-700 ಕಾರನ್ನು ಮಹಿಂದ್ರಾ ಅವಾನಿಗೆ ಕೊಟ್ಟಿದ್ದಾರೆ.
ಪದವೀಧರರಿಗೆ ಶುಭ ಸುದ್ದಿ: 15 ಸಾವಿರ ಶಿಕ್ಷಕರ ನೇಮಕಾತಿ
ಕಾರಿನೊಂದಿಗೆ ತಮ್ಮ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡ ಅವಾನಿ, ಆನಂದ್ ಮಹಿಂದ್ರಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಕಾರಿನ ಚಾಲನೆಯನ್ನು ಸುಲಭಗೊಳಿಸಲು ಸೀಟುಗಳನ್ನು ಹೈಡ್ರಾಲಿಕ್‌ನೊಂದಿಗೆ ಲಿಂಕ್ ಮಾಡಲಾಗಿದೆ. ಈ ಕಾರಣದಿಂದಾಗಿ ಗಾಲಿಕುರ್ಚಿ ಮೂಲಕ ಕಾರಿನಲ್ಲಿ ಕೂರಬಹುದಾಗಿದೆ. ಇದರೊಂದಿಗೆ, ದೈಹಿಕ ಸವಾಲುಗಳಿರುವ ಮಂದಿಗೆ ಕಾರಿನಲ್ಲಿ ಆರಾಮವಾಗಿ ಕೂರಲು ಇನ್ನಷ್ಟು ಮಾರ್ಪಾಡುಗಳನ್ನು ಮಾಡಲಾಗಿದೆ.
“ಗುಡ್ ಜಾಬ್ ಟೀಂ! ಎಕ್ಸ್‌ಯುವಿ700 ಅನ್ನು ನಿಮ್ಮ ರಥವನ್ನಾಗಿ ಮಾಡಿಕೊಂಡು ಅದನ್ನು ಗೌರವಿಸಿದ ನಿಮಗೆ ಧನ್ಯವಾದ ಅವಾನಿ ಲೇಖರಾ,” ಎಂದು ಆನಂದ್ ಮಹಿಂದ್ರಾ ಟ್ವೀಟ್ ಮಾಡಿದ್ದಾರೆ.
ಜೈಪುರ ಅವಾನಿ ಲೇಖರಾ, ಟೋಕ್ಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಹಾಗೂ ಕಂಚಿನ ಪದಕ ಜಯಿಸಿದ್ದಾರೆ. ಪ್ಯಾರಾಲಿಂಪಿಕ್ಸ್‌ನ ಒಂದೇ ಕೂಟದಲ್ಲಿ ಎರಡು ಪದಕ ಜಯಿಸಿದ ಮೊದಲ ಪ್ಯಾರಾಲಿಂಪಿಯನ್ ಆಗಿದ್ದಾರೆ ಅವಾನಿ. ಇದೇ ವೇಳೆ, ದೇಶದ ಅತ್ಯುನ್ನತ ಕ್ರೀಡಾ ಗೌರವ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನಕ್ಕೂ ಭಾಜನರಾಗಿದ್ದಾರೆ ಅವಾನಿ.