
ಫಿಫಾ ವಿಶ್ವಕಪ್ 2022ಕ್ಕೆ ಇನ್ನು ಹೆಚ್ಚು ದಿನ ಉಳಿದಿಲ್ಲ. ವಿಶ್ವಾದ್ಯಂತ ಫುಟ್ಬಾಲ್ ಜ್ವರ ಆರಂಭವಾಗಿದೆ. ಇದು ಮಕ್ಕಳನ್ನೂ ಬಿಟ್ಟಿಲ್ಲ ಎಂಬುದಕ್ಕೆ ಅನೇಕ ಉದಾಹರಣೆ ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುತ್ತದೆ.
ಇದೀಗ ಉದ್ಯಮಿ ಆನಂದ್ ಮಹೀಂದ್ರ ಒಂದು ರೋಚಕ ವಿಡಿಯೋ ಪೋಸ್ಟ್ ಮಾಡಿದ್ದು, ಮಕ್ಕಳ ಕ್ರೇಜ್ ಗಮನ ಸೆಳೆಯುವಂತಿದೆ.
ಮಹೀಂದ್ರಾ ಹಂಚಿಕೊಂಡ ವೈರಲ್ ವಿಡಿಯೊದಲ್ಲಿ ಉಗಾಂಡಾದ ಮಕ್ಕಳ ಹರ್ಷಚಿತ್ತದ ನೃತ್ಯ ಪ್ರದರ್ಶನ ಕಾಣಬಹುದು.
ಫಿಫಾ ಮತ್ತು ಕತಾರ್, ವಿಶ್ವಕಪ್ ಪ್ರಚಾರದ ವಿಡಿಯೊ, ಜಾಹೀರಾತುಗಳಿಗಾಗಿ ಕೋಟ್ಯಾಂತರ ರೂ. ಖರ್ಚು ಮಾಡುತ್ತವೆ. ಫುಟ್‌ಬಾಲ್ ಎಂದರೆ ಏನೆಂಬುದನ್ನು ಜಗತ್ತಿಗೆ ತಿಳಿಸುವ ಈ ಅಗ್ಗದ ಮತ್ತು ಹರ್ಷಚಿತ್ತದಿಂದ ಕೂಡಿದ ವೀಡಿಯೊ ಉತ್ಸಾಹ ಜನರಿಗೆ ಫುಟ್ಬಾಲ್ ಸೋಂಕು ತಗುಲಿಸುತ್ತದೆ ಎಂದು ಆನಂದ್ ಮಹೀಂದ್ರ ಅವರು ಡ್ಯಾನ್ಸ್ ವೀಡಿಯೊವನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.
ಮಕ್ಕಳ ತಂಡವೊಂದು ಫಿಫಾ ಬ್ಯಾನರ್ ಹಿಡಿದು ಮೈದಾನಕ್ಕೆ ಆಗಮಿಸುವಂತೆ ಮತ್ತು ರೆಫರಿ ನಡುವೆ ಎರಡು ತಂಡಗಳು, ಅವರ ಸಂಭ್ರಮ ವಿಡಿಯೋದಲ್ಲಿ ಕಾಣಸಿಗುತ್ತದೆ.