ನವದೆಹಲಿ: ಸದಾ ಒಂದಿಲ್ಲೊಂದು ಕುತೂಹಲದ ವಿಷಯಗಳನ್ನು ಶೇರ್ಮಾಡಿಕೊಳ್ಳುವ ಉದ್ಯಮಿ ಆನಂದ್ ಮಹೀಂದ್ರಾ ಅವರಿಗೆ ನೆಟ್ಟಿಗರು ಒಂದು ಪ್ರಶ್ನೆ ಮುಂದಿಟ್ಟಿದ್ದರು. ಅದೇನೆಂದರೆ ನೀವು ಯಾವುದೇ ವಿಮಾನಯಾನ ಸಂಸ್ಥೆಯನ್ನು ಭವಿಷ್ಯದಲ್ಲಿ ಹೊಂದಲು ಇಷ್ಟಪಡುವಿರಾ ಎಂದು.
ಪದೇ ಪದೇ ಕೇಳುತ್ತಿರುವ ಪ್ರಶ್ನೆಗೆ ಆನಂದ್ ಮಹೀಂದ್ರಾ ಟ್ವಿಟ್ಟರ್‌ನಲ್ಲಿ ಉತ್ತರಿಸಿದ್ದಾರೆ. ಅದೇನೆಂದರೆ, ಭವಿಷ್ಯದಲ್ಲಿ ವಿಮಾನಯಾನ ಸಂಸ್ಥೆಯನ್ನು ಪ್ರಾರಂಭಿಸುವ ಅಥವಾ ಖರೀದಿಸುವ ಯಾವುದೇ ಯೋಜನೆಯನ್ನು ನಾನು ಹೊಂದಿಲ್ಲ ಎಂದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೇ ಇದಕ್ಕೆ ಕಾರಣ ನೀವೇ ಊಹಿಸಿ ಎಂದಿದ್ದಾರೆ.
ಅದಕ್ಕೆ ನೆಟ್ಟಿಗರು ಆನಂದ್ ಮಹೀಂದ್ರಾ ಹೀಗೆ ಏಕೆ ಉತ್ತರ ಕೊಟ್ಟಿರಬಹುದು ಎಂದು ತಾವೇ ಊಹಿಸಿ ಪ್ರತ್ಯುತ್ತರ ಬರೆದಿದ್ದಾರೆ. ಅದೇನೆಂದರೆ, “ವಿಮಾನಯಾನ ಸಂಸ್ಥೆ ವಿಶ್ವದಲ್ಲೇ ಅತಿ ದೊಡ್ಡ ನಷ್ಟ ಮಾಡುವ ವ್ಯಾಪಾರವಾಗಿದೆ. ಯಾವುದೇ ವಿಮಾನಯಾನ ಸಂಸ್ಥೆಯು ಲಾಭದಲ್ಲಿ ದೀರ್ಘ ಪ್ರಯಾಣವನ್ನು ನಡೆಸಿಲ್ಲ. ಆದ್ದರಿಂದ ಆನಂದ್ ಮಹೀಂದ್ರಾ ಇದನ್ನು ಖರೀದಿಸಲು ಇಷ್ಟಪಟ್ಟಿಲ್ಲ” ಎಂದು.
ಇನ್ನೊಬ್ಬ ಬಳಕೆದಾರ ನನ್ನ ಸ್ಕಾರ್ಪಿಯೋ ಏರೋಪ್ಲೇನ್‌ಗಿಂತ ಕಡಿಮೆಯಿಲ್ಲ. ಅದನ್ನೇ ಖರೀದಿಸಿ ಎಂದು ತಮಾಷೆಯಾಗಿ ಬರೆದಿದ್ದಾನೆ. ಹೀಗೆ ಹಲವರು ಇದಕ್ಕೆ ರಿಪ್ಲೈ ಮಾಡುತ್ತಿದ್ದಾರೆ. ಕೆಲವರು ವಿಮಾನ ಸಂಸ್ಥೆ ಶುರು ಮಾಡಿ ಎಂದೂ ಸಲಹೆ ಕೊಟ್ಟಿದ್ದಾರೆ.