ವೈರಲ್ ವಿಡಿಯೋಗಳ ಪೈಕಿ ಕೆಲವು ದೊಡ್ಡ ದೊಡ್ಡ ಉದ್ಯಮಿಗಳ ವಿಡಿಯೋ ಗಮನಸೆಳೆದು ಬಿಡುತ್ತವೆ. ಅವರು ಅದನ್ನು ಶೇರ್ ಮಾಡಿದಾಗ, ಅವರ 90 ಲಕ್ಷ ಫಾಲೋಯರ್ಸ್ಗೂ ಅದು ತಲುಪುತ್ತದೆ. ಅಂತಹ ಉದ್ಯಮಿಗಳ ಪೈಕಿ ಮಹಿಂದ್ರಾ ಕಂಪನಿ ಆನಂದ್ ಮಹಿಂದ್ರಾ ಒಬ್ಬರು. ಅವರ ಟ್ವೀಟ್ಗಳನ್ನು ಗಮನಿಸುವವರ ಸಂಖ್ಯೆ ಹೆಚ್ಚು. ಭಾರತದ ಅದ್ಭುತ ಪ್ರತಿಭೆಗಳು, ಆವಿಷ್ಕಾರಗಳ ಕುರಿತಾದ ವಿಡಿಯೋ, ಫೋಟೋ, ಮಾಹಿತಿಗಳನ್ನು ಅವರು ಆಗಾಗ್ಗೆ ಶೇರ್ ಮಾಡುತ್ತಿರುತ್ತಾರೆ.
ಉದ್ದ ಮರಗಳಿಂದ ಹಣ್ಣು ಕೊಯ್ಯಲು ಬಳಸುವ ದೇಸಿ ಟೆಕ್ನಿಕ್ ಕುರಿತ ವಿಡಿಯೋವನ್ನು ಇತ್ತೀಚೆಗೆ ಅವರು ಟ್ವೀಟ್ ಮೂಲಕ ಶೇರ್ ಮಾಡಿದ್ದಾರೆ. ಇದರಲ್ಲಿ, ದೊಡ್ಡ ಪ್ಲಾಸ್ಟಿಕ್ ಕೋಕ್ ಬಾಟಲ್, ಸ್ಟ್ರಿಂಗ್ ಮತ್ತು ಪಿವಿಸಿ ಪೈಪ್ ಬಳಸಿ ಹಣ್ಣು ಕೊಯ್ಯುವ ಉಪಕರಣವನ್ನು ತಯಾರಿಸುವ ಮತ್ತು ಬಳಸುವ ವಿಧಾನವಿದೆ.
BIG NEWS: ವಿ.ಹೆಚ್.ಪಿ.ಯಿಂದ ಶ್ರೀರಂಗಪಟ್ಟಣ ಚಲೋ; ನಿಷೇಧಾಜ್ಞೆ ಉಲ್ಲಂಘಿಸಿದರೆ ಕಾನೂನು ಕ್ರಮ; ಎಸ್ ಪಿ ಎಚ್ಚರಿಕೆ
“ ಅತ್ಯದ್ಭುತ ಎನ್ನಬಹುದಾದ ಆವಿಷ್ಕಾರ’ ಅಲ್ಲದಿದ್ದರೂ, ದೇಸಿ ಟೆಕ್ನಿಕ್ ಬೆಳೆಯುತ್ತಿರುವ ಸಂಸ್ಕೃತಿಯನ್ನು ತೋರಿಸುತ್ತದೆ. ಆದ್ದರಿಂದಲೇ ಇದರಿಂದ ಆಕರ್ಷಿತನಾದೆ. ಅಮೆರಿಕದಲ್ಲಿ ಜನ ತಮ್ಮ ನೆಲಮಾಳಿಗೆಯಲ್ಲಿ / ಗ್ಯಾರೇಜ್ ಕಾರ್ಯಾಗಾರಗಳಲ್ಲಿ ಪ್ರಯೋಗ ಮಾಡುವ ಅಭ್ಯಾಸ ಮಾಡಿಕೊಂಡದ್ದರಿಂದ ಅದು ಸೃಜನಶೀಲತೆಯ ಶಕ್ತಿ ಕೇಂದ್ರವಾಯಿತು. ಇಂತಹ ಪ್ರಯತ್ನಗಳು ಹೊಸ ಉದ್ಯಮ ಸ್ಥಾಪನೆಗೆ ಕಾರಣವಾಗಬಹುದು” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಈ ವಿಡಿಯೊ 5.38 ಲಕ್ಷಕ್ಕೂ ಹೆಚ್ಚು ವೀಕ್ಷಣೆ, 31 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿವೆ. ಕಾಮೆಂಟ್ ವಿಭಾಗದಲ್ಲಿ ವಿಭಿನ್ನ ಪ್ರತಿಕ್ರಿಯೆಗಳಿವೆ.