ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ತಮಗೆ ಏನಾದರೂ ಕುತೂಹಲ ಎನ್ನಿಸಿದ್ದನ್ನು ಕಂಡರೆ ಅದನ್ನು ಶೇರ್ ಮಾಡಿಕೊಳ್ಳುತ್ತಾರೆ. ಅಂಥದ್ದೇ ಒಂದು ಕುತೂಹಲದ ವಿಡಿಯೋ ಈಗ ವೈರಲ್ ಆಗಿದೆ.
ತುಂಬಾ ಸಿಂಪಲ್ ಎನಿಸಿದರೂ ಅಸಾಧ್ಯವೆನಿಸುವ ವಿಡಿಯೋ ಇದಾಗಿದೆ. ಅದು ಷರ್ಟ್ ಒಂದನ್ನು ಸುಲಭದಲ್ಲಿ ಮಡಿಸುವ ವಿಧಾನವಾಗಿದೆ.
ಸಾಧಾರಣವಾಗಿ ಎಲ್ಲರಿಗೂ ಇದು ತಿಳಿದಿರುತ್ತದೆ. ಆದರೆ ಅತಿ ಸುಲಭದಲ್ಲಿ ಅತ್ಯಂತ ಸುಂದರವಾಗಿ ಷರ್ಟ್ ಮಡಚಿ ಇಡುವ ವಿಧಾನವೊಂದು ಯುವತಿ ತೋರಿಸುತ್ತಿದ್ದಾಳೆ.
ಇದರಲ್ಲಿ ಯುವತಿಯು ಟೀ ಶರ್ಟ್ ಮಡಚಿರುವುದನ್ನು ಕಾಣಬಹುದು. ಬಟ್ಟೆಯ ತುಂಡಿನ ಒಂದು ಬದಿಯಲ್ಲಿ 1,2 ಮತ್ತು 3 ಸಂಖ್ಯೆಗಳನ್ನು ಬರೆದ ಸಣ್ಣ ಕಾರ್ಡ್‌ಗಳನ್ನು ಹಾಕಿದ್ದಾಳೆ. ಮತ್ತು ಆ ನಂಬರ್ ಕಾರ್ಡ್ ತೆಗೆದು ಅದೇ ಸ್ಥಳಗಳಿಂದ ಮಡಚುತ್ತಾಳೆ.
ಕೆಲ ಸೆಕೆಂಡ್ನಲ್ಲಿಯೇ ಷರ್ಟ್ ಅನ್ನು ಅತ್ಯಂತ ಸುಂದರವಾಗಿ ಮಡಚುತ್ತಾಳೆ. ಇದನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಈಕೆ ತೋರಿಸುವುದು ಸುಲಭ ಎನ್ನಿಸಿದರೂ ಅಷ್ಟು ಸುಂದರವಾಗಿ ಮಡಚಲು ಬರುವುದು ಕಷ್ಟ ಎನ್ನುತ್ತಿದ್ದಾರೆ.