ಮದುವೆ ಬಗ್ಗೆ 32 ವರ್ಷಗಳಿಂದ ನಡೆದ ಸರ್ವೆಯೊಂದರ ಫಲಿತಾಂಶ ಅಚ್ಚರಿಗೊಳಿಸುವಂತಿದೆ. ವೈವಾಹಿಕ ಜೀವನದಲ್ಲಿ ನಿರಾಶೆ ಮತ್ತು ಒತ್ತಡವಿರುವ ಪುರುಷರ ಸಾವಿನ ಅಪಾಯವು ಶೇಕಡಾ 19 ರಷ್ಟು ಹೆಚ್ಚಾಗುತ್ತದೆ ಎಂಬುದು ಇದ್ರಿಂದ ಪತ್ತೆಯಾಗಿದೆ.
ಈ ಅಧ್ಯಯನವನ್ನು ಇಸ್ರೇಲ್‌ನ ಟೆಲ್ ಅವೀವ್ ವಿಶ್ವವಿದ್ಯಾಲಯವು 32 ವರ್ಷಗಳ ಕಾಲ ನಡೆಸಿದೆ. ಭಾರತದಲ್ಲಿ ಮದುವೆಯನ್ನು ಜನ್ಮ ಜನ್ಮಗಳ ಸಂಬಂಧವೆಂದು ನಂಬಲಾಗುತ್ತದೆ. ಒಂದು ಅಧ್ಯಯನದ ಪ್ರಕಾರ, ನಮ್ಮ ದೇಶದಲ್ಲಿ ಪ್ರತಿವರ್ಷ 10 ಮಿಲಿಯನ್ ವಿವಾಹಗಳು ನಡೆಯುತ್ತವೆ. ಅದರಲ್ಲಿ ಶೇಕಡಾ 80ರಷ್ಟು ವಿವಾಹಗಳು ಹಿಂದೂ ಧರ್ಮದಲ್ಲಿ ನಡೆಯುತ್ತವೆ. 100 ಮದುವೆಗಳಲ್ಲಿ ಒಬ್ಬರು ಮಾತ್ರ ವಿಚ್ಛೇದನ ಪಡೆಯುತ್ತಾರೆ. ಹಾಗಂತ ಉಳಿದವರು ವಿವಾಹದಿಂದ ಖುಷಿಯಾಗಿದ್ದಾರೆಂದಲ್ಲ. ಮಕ್ಕಳು, ಕುಟುಂಬ ನಿರ್ವಹಣೆ ಹಿನ್ನಲೆಯಲ್ಲಿ ಅಸಂತೋಷದ ಜೀವನ ನಡೆಸುತ್ತಾರೆ. ಸಂತೋಷವಿಲ್ಲದೆ ಜೀವನ ನಡೆಸುವ ಪುರುಷರಿಗೆ ಸಾವಿನ ಅಪಾಯವು ಶೇಕಡಾ 19 ರಷ್ಟು ಹೆಚ್ಚಾಗುತ್ತದೆ ಎಂದು ಹೊಸ ಅಧ್ಯಯನ ಹೇಳಿದೆ.
ಈ ಅಧ್ಯಯನವನ್ನು 32 ವರ್ಷಗಳ ಕಾಲ ನಡೆಸಲಾಗಿದೆ. ಇದರಲ್ಲಿ 40 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ 9 ಸಾವಿರ ಪುರುಷರನ್ನು ಸಂದರ್ಶಿಸಲಾಗಿದೆ. ವೈವಾಹಿಕ ಜೀವನದ ಖುಷಿಯನ್ನು 1 ರಿಂದ 4 ರ ನಡುವೆ ರೇಟಿಂಗ್ ನಲ್ಲಿ ಹೇಳಿದ್ದಾರೆ. ವೈವಾಹಿಕ ಜೀವನ ಖುಷಿಯಾಗಿಲ್ಲ ಎಂದವರ ಪೈಕಿ ಸುಮಾರು ಶೇಕಡಾ 70 ರಷ್ಟು ಜನರಿಗೆ ಹೃದಯ ಮತ್ತು ಮೆದುಳಿನ ಪಾರ್ಶ್ವವಾಯು ಸಮಸ್ಯೆ ಕಾಡಿತ್ತೆಂದು ಅಧ್ಯಯನ ಹೇಳಿದೆ.
ಪತಿ-ಪತ್ನಿ ನಡುವಿನ ಅಸಂತೋಷ ಧೂಮಪಾನಕ್ಕೆ ಸಮಾನವೆಂದು ಅಧ್ಯಯನ ಹೇಳಿದೆ. ವೈವಾಹಿಕ ಜೀವನದಲ್ಲಿ ಅಸಂತೋಷ ಅನುಭವಿಸುವವರು ಪ್ರತಿ ಕ್ಷಣ ಧೂಮಪಾನ ಮಾಡಿದಾಗ ಕಾಡುವ ಅನಾರೋಗ್ಯದ ಅಪಾಯವನ್ನು ಎದುರಿಸುತ್ತಾರೆ ಎಂದು ಅಧ್ಯಯನ ಹೇಳಿದೆ.