‘ಚೋಲೆ ಭತುರೆ’ಗೆ ಭಾರಿ ಬೆಲೆ ತೆತ್ತ ವ್ಯಕ್ತಿ…! ಫೋಟೋ ನೋಡಿ ಅಸಹ್ಯ ಪಟ್ಟುಕೊಂಡ ಭಾರತೀಯರು..! 07-12-2021 7:30AM IST / No Comments / Posted In: Latest News, Live News, International ಚೋಲೆ ಭತುರೆ ಎಂಬ ಖಾದ್ಯವು ಉತ್ತರ ಪ್ರದೇಶದ ಅತ್ಯಂತ ಜನಪ್ರಿಯ ಬೀದಿ ಆಹಾರಗಳಲ್ಲಿ ಒಂದಾಗಿದೆ. ಚನಾ ಮಸಾಲಾ (ಮಸಾಲೆಯುಕ್ತ ಬಿಳಿ ಕಡಲೆ) ಮತ್ತು ಭತುರಾ (ಹುದುಗಿಸಿದ ಬ್ರೆಡ್) ಸಂಯೋಜನೆ, ಇದನ್ನು ಈರುಳ್ಳಿ, ಉಪ್ಪಿನಕಾಯಿ ಕ್ಯಾರೆಟ್ ಮತ್ತು ಹಸಿರು ಚಟ್ನಿಯೊಂದಿಗೆ ಉಪಹಾರ ಅಥವಾ ಮಧ್ಯಾಹ್ನದ ಊಟದ ಜೊತೆಗೆ ಸೇವಿಸಲಾಗುತ್ತದೆ. ಬೀದಿ ಬದಿಯ ಸ್ಟಾಲ್‌ನಲ್ಲಿ ಈ ಖಾದ್ಯಕ್ಕೆ ಒಂದು ಪ್ಲೇಟ್ ಗೆ 80 ಅಥವಾ 90 ರೂ.ಗಳಿಗಿಂತ ಹೆಚ್ಚು ವೆಚ್ಚವಾಗುವುದಿಲ್ಲ. ರೆಸ್ಟೋರೆಂಟ್‌ಗಳಲ್ಲಿ ಇದರ ಬೆಲೆ 200 ರೂ. ಅಥವಾ 300 ರೂ.ನಷ್ಟಿರಬಹುದು. ಇನ್ನು ವಿಮಾನ ನಿಲ್ದಾಣದಲ್ಲಂತೂ ಯಾವುದೇ ವಸ್ತುಗಳ ಅಥವಾ ಆಹಾರದ ಬೆಲೆ ತುಸು ಹೆಚ್ಚೇ ಇರುತ್ತದೆ. ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ಚೋಲೆ ಭತುರ್ ಗೆ 500 ರೂ.ವರೆಗೆ ಇದೆ. ಆದರೆ, ಸ್ವೀಡನ್‌ನಲ್ಲಿ ಈ ಖಾದ್ಯದ ಬೆಲೆಯೆಷ್ಟು ಎಂಬುದನ್ನು ಕೇಳಿದ್ರೆ ನೀವು ಖಂಡಿತಾ ಶಾಕ್ ಆಗ್ತೀರಾ.. ಅಲ್ಲಿ ಭಾರತೀಯ ಆಹಾರ ಚೋಲೆ ಭತುರ್ ಒಂದು ಪ್ಲೇಟ್‌ಗೆ ರೂ 1,000 ರೂ. ವೆಚ್ಚವಾಗುತ್ತದೆ. ಈ ಬಗ್ಗೆ ರೆಡ್ಡಿಟ್‌ನಲ್ಲಿ ಭಾರತೀಯ ವ್ಯಕ್ತಿಯೊಬ್ಬ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾನೆ. ಭಾರತೀಯ ಆಹಾರ ಸವಿಯುವುದಕ್ಕಾಗಿ ಸ್ಟಾಕ್‌ಹೋಮ್‌ನಲ್ಲಿರುವ ರೆಸ್ಟೋರೆಂಟ್‌ಗೆ ಈತ ಹೋಗಿದ್ದಾನೆ. ಇದಕ್ಕಾಗಿ ಆತ ತನ್ನ ಜೇಬಿನಿಂದ 1,000 ರೂ.ಅನ್ನು ಕಳೆದುಕೊಳ್ಳಬೇಕಾಯಿತು. ಖಾದ್ಯದ ಎರಡು ಫೋಟೋಗಳನ್ನು ರೆಡ್ಡಿಟ್ ನಲ್ಲಿ ಹಂಚಿಕೊಳ್ಳಲಾಗಿದೆ. ಭಾರತದ ಶೈಲಿಗಿಂತ ಭಿನ್ನವಾಗಿ, ಚೋಲೆ (ಕಡಲೆ) ಅನ್ನು ಭಟೂರ್ (ಬ್ರೆಡ್) ಮೇಲೆ ಹಿಟ್ಟಿನ ರೂಪದಲ್ಲಿಟ್ಟಂತೆ ಬಡಿಸಲಾಗಿದೆ. ಈ ಫೋಟೋ ನೋಡಿದ ನೆಟ್ಟಿಗರು ತಬ್ಬಿಬ್ಬಾಗಿದ್ದಾರೆ. ಕಡಲೆಯ ಮುದ್ದೆಯನ್ನು ಕೊತ್ತಂಬರಿ ಸೊಪ್ಪು ಮತ್ತು ಸಲಾಡ್‌ನೊಂದಿಗೆ ಬೆರೆಸಲಾಗಿದೆ. ಪ್ಲೇಟ್ ಜೊತೆ ಒಂದು ಚಾಕು ಮತ್ತು ಫೋರ್ಕ್ ಅನ್ನು ಇಡುವ ಮುಖಾಂತರ ಆಹಾರವನ್ನು ಇನ್ನಷ್ಟು ಕೆಟ್ಟದಾಗಿ ಮಾಡಲಾಗಿದೆ. ಫೋಟೋ ನೋಡಿದ ಭಾರತೀಯ ನೆಟ್ಟಿಗರು ಇದನ್ನು ಅಸಹ್ಯ ಎಂದು ಕರೆದಿದ್ದಾರೆ. Ladies and gentlemen, Here is the Chole Bhature that I was served at an Indian restaurant in Stockholm, Sweden. I miss home. byu/pillsburyboi inindia