alex Certify BIG NEWS: ಬಾಡಿಗೆ ತಾಯ್ತನದ ಕುರಿತು ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ; ದಾನಿಗಳ ಅಂಡಾಣು ಮತ್ತು ವೀರ್ಯ ಪಡೆಯಲು ಅನುಮತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಾಡಿಗೆ ತಾಯ್ತನದ ಕುರಿತು ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ; ದಾನಿಗಳ ಅಂಡಾಣು ಮತ್ತು ವೀರ್ಯ ಪಡೆಯಲು ಅನುಮತಿ….!

ಬಾಡಿಗೆ ತಾಯ್ತನದ ಮೂಲಕ ಪೋಷಕರಾಗುವ ಕನಸು ಹೊಂದಿರುವ ದಂಪತಿಗಳಿಗೆ ಹೊಸ ಭರವಸೆ ಮೂಡಿದೆ. ದಾನಿಗಳ ಗ್ಯಾಮೆಟ್‌ಗಳ (ಮೊಟ್ಟೆಗಳು ಮತ್ತು ವೀರ್ಯ) ಬಳಕೆಯನ್ನು ಅನುಮತಿಸಲು ಕೇಂದ್ರ ಸರ್ಕಾರವು ಬಾಡಿಗೆ ತಾಯ್ತನ ನಿಯಮಗಳನ್ನು ಜಾರಿ ಮಾಡಿದೆ. ಪತಿ ಅಥವಾ ಪತ್ನಿ ವೈದ್ಯಕೀಯ ಸ್ಥಿತಿಯ ಕಾರಣದಿಂದ ಸ್ವಂತ ಗ್ಯಾಮೆಟ್‌ಗಳನ್ನು (ಮೊಟ್ಟೆಗಳು ಅಥವಾ ವೀರ್ಯ) ಬಳಸಲು ಅಸಮರ್ಥರಾಗಿದ್ದಾರೆಂದು ಪ್ರಮಾಣೀಕರಿಸಿದರೆ ದಾನಿಗಳ ಗ್ಯಾಮೆಟ್‌ಗಳನ್ನು ಬಳಸಲು ಅನುಮತಿಸಲಾಗಿದೆ.

ಸಾಮಾನ್ಯ ಸಂದರ್ಭಗಳಲ್ಲಿ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಲು ಬಯಸುವ ದಂಪತಿಗಳು ಎರಡೂ ಗ್ಯಾಮೆಟ್‌ಗಳನ್ನು ಹೊಂದಿರಬೇಕು. ಬಾಡಿಗೆ ತಾಯ್ತನಕ್ಕಾಗಿ ತಮ್ಮ ಗ್ಯಾಮೆಟ್‌ಗಳನ್ನು ದಾನ ಮಾಡಲು ಸಾಧ್ಯವಾಗದಿದ್ದಾಗ, ಇಬ್ಬರಲ್ಲಿ ಒಬ್ಬರು ವೈದ್ಯಕೀಯ ಸಮಸ್ಯೆ ಹೊಂದಿದ್ದರೆ ಅವರು ಬಾಡಿಗೆ ತಾಯಿಯ ಮೂಲಕವೂ ಮಗು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಈ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.

ಬಾಡಿಗೆ ತಾಯ್ತನ (ನಿಯಂತ್ರಣ) ತಿದ್ದುಪಡಿ ನಿಯಮಗಳು 2024ರ ಪ್ರಕಾರ, ದಂಪತಿಗಳಲ್ಲಿ ಯಾರಿಗಾದರೂ ಸಮಸ್ಯೆ ಇದ್ದಲ್ಲಿ ಜಿಲ್ಲಾ ವೈದ್ಯಕೀಯ ಮಂಡಳಿಯು ಅದನ್ನು ಪ್ರಮಾಣೀಕರಿಸಬೇಕು. ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ದಂಪತಿಗಳಿಂದ ಕನಿಷ್ಠ ಒಂದು ಗ್ಯಾಮೆಟ್ ಹೊಂದಿರಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ. ಒಂಟಿ ಮಹಿಳೆ (ವಿಧವೆ ಅಥವಾ ವಿಚ್ಛೇದಿತೆ) ಬಾಡಿಗೆ ತಾಯ್ತನಕ್ಕೆ ಒಳಗಾಗಲು ಬಯಸಿದಲ್ಲಿ ತನ್ನ ಸ್ವಂತ ಎಗ್ಸ್‌ ಮತ್ತು ದಾನಿಗಳ ವೀರ್ಯವನ್ನು ಬಳಸಬೇಕು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಬಾಡಿಗೆ ತಾಯ್ತನವನ್ನು ಬಯಸುವ ದಂಪತಿಗಳಿಗೆ ದಾನಿಗಳ ಗ್ಯಾಮೆಟ್‌ಗಳನ್ನು ನಿಷೇಧಿಸಿ ಮಾರ್ಚ್ 2023 ರಲ್ಲಿ ಕೇಂದ್ರ ಅಧಿಸೂಚನೆ ಹೊರಡಿಸಿತ್ತು. ಆದರೆ ಎಗ್ಸ್‌ ಅಥವಾ ವೀರ್ಯ ಉತ್ಪತ್ತಿಯಲ್ಲಿ ಸಮಸ್ಯೆಗಳಿರುವವರಿಗೆ ಮಗು ಹೊಂದಲು ಈ ನಿಯಮ ಅಡ್ಡಿಯಾಗುತ್ತದೆ ಎಂದು ಪರಿಹಾರ ಕೋರಿ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.

ಸಾಕಷ್ಟು ಅರ್ಜಿಗಳು ಬಂದಿದ್ದರಿಂದ ಸುಪ್ರೀಂ ಕೋರ್ಟ್, 2023ರ ಅಧಿಸೂಚನೆಯನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನ್ನ ನಿಯಮಗಳಲ್ಲಿ ಬದಲಾವಣೆ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...