
ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನೌಕರರೊಬ್ಬರು ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆ ಮನಗೂಳಿ ಪಟ್ಟಣದ ಅಂಚೆ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, 51 ವರ್ಷದ ಎಲ್ಲಪ್ಪ ಗೋಪಾಲ ಭಜಂತ್ರಿ ಮೃತಪಟ್ಟ ನೌಕರರಾಗಿದ್ದಾರೆ. ಇವರು ಕಳೆದ 20 ವರ್ಷಗಳಿಂದ ಅಂಚೆ ಕಚೇರಿಯಲ್ಲಿ GDS ಪ್ಯಾಕರ್ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.
ಎಂದಿನಂತೆ ಕಚೇರಿಗೆ ಬಂದಿದ್ದ ಅವರು ಸಹೋದ್ಯೋಗಿಗಳೊಂದಿಗೆ ನಗುನಗುತ್ತಲೆ ಮಾತಾಡಿದ್ದರು. ಅಲ್ಲದೆ ತಮ್ಮ ಕರ್ತವ್ಯದಲ್ಲೂ ತೊಡಗಿಸಿಕೊಂಡಿದ್ದರು. ಹೀಗೆ ಲವಲವಿಕೆಯಿಂದ ಇದ್ದ ಎಲ್ಲಪ್ಪ ಗೋಪಾಲ ಭಜಂತ್ರಿ ಕಣ್ಣೆದುರೆ ಸಾವನ್ನಪ್ಪಿರುವುದನ್ನು ಕಂಡು ಸಹೋದ್ಯೋಗಿಗಳು ಕಣ್ಣೀರಿಟ್ಟಿದ್ದಾರೆ.