ಇದೊಂದು ವಿಲಕ್ಷಣ ಪ್ರಯತ್ನ. ಮಹಿಳೆಯೊಬ್ಬರು ತಮ್ಮ ರೆಸ್ಯೂಮ್ ಅನ್ನು ಪ್ರಿಂಟ್ ಮಾಡಿ ಕೇಕ್ ಮೇಲೆ ಹಾಕುವ ಮೂಲಕ ನೈಕ್ ಕಂಪನಿಗೆ ಕಳುಹಿಸಿದ್ದಾರೆ.
ತನ್ನ ಲಿಂಕ್ಡ್ಇನ್ನಲ್ಲಿ ಕೇಕ್ ಚಿತ್ರವನ್ನು ಆಕೆ ಪೋಸ್ಟ್ ಮಾಡಿದ್ದು, ಒಂದೆರಡು ವಾರಗಳ ಹಿಂದೆ ನಾನು ನನ್ನ ರೆಸ್ಯೂಮ್ ಅನ್ನು ಕೇಕ್ ಮೇಲೆ ನೈಕ್ಗೆ ಕಳುಹಿಸಿದ್ದೆ. ಹೌದು, ಕೇಕ್ ಮೇಲೆ ತಿನ್ನಬಹುದಾದ ರೆಸ್ಯೂಮ್ ಎಂದಿದ್ದಾರೆ.
ನೆೈಕ್ ಜೆಡಿಐ ದಿನದಂದು (ಜಸ್ಟ್ ಡು ಇಟ್ ಡೇ) ಅದ್ಧೂರಿ ಆಚರಣೆಯನ್ನು ನಡೆಸುತ್ತಿತ್ತು. ಲೆಬ್ರಾನ್ ಜೇಮ್ಸ್, ಕಾಲಿನ್ ಕೆೈಪನಿರ್ಕ್ ಪ್ಲಸ್ ಇತರ ಮೆಗಾಸ್ಟಾರ್ಗಳು ಈವೆಂಟ್ನಲ್ಲಿದ್ದರು. ನಾನು ಕೆಲವು ರಿಸರ್ಚ್ ಮಾಡಿದ್ದೇನೆ ಮತ್ತು ನೆೈಕ್ನಲ್ಲಿ ವ್ಯಾಲಿಯಂಟ್ ಲ್ಯಾಬ್ಸ್ ಎಂಬ ವಿಭಾಗವನ್ನು ಗುರುತಿಸಿದ್ದು, ಅದು ನೆೈಕ್ ಐಡಿಯಾಗಳಿಗಾಗಿ ಆರಂಭಿಕ ಇನ್ಕ್ಯುಬೇಟರ್ ಆಗಿದೆ” ಎಂದು ಅವರು ಬರೆದಿದ್ದಾರೆ.
ಕಂಪನಿಯು ಆ ತಂಡದ ಯಾವುದೇ ಸ್ಥಾನಗಳಿಗೆ ನೇಮಕ ಮಾಡಿಕೊಳ್ಳುತ್ತಿಲ್ಲ ಎಂಬುದನ್ನು ಆಕೆ ಇದೇ ವೇಳೆ ಹೆೈಲೈಟ್ ಮಾಡಿದರು.
ನಾನು ನನ್ನ ಮಾಜಿ ಸಹೋದ್ಯೋಗಿ ಟ್ರೆಂಟ್ ಗ್ಯಾಂಡರ್ ಅವರೊಂದಿಗೆ ಏನು ಮಾಡುವುದೆಂದು ಯೋಚಿಸುತ್ತಿದ್ದೆ, ಕೊನೆಗೆ ಕೇಕ್ ಮೇಲೆ ರೆಸ್ಯೂಮ್ ಸಿದ್ಧಪಡಿಸಿ ತಲುಪಬೇಕಾದ ಸ್ಥಳಕ್ಕೆ ತಲುಪಿಸುವ ಯೋಜನೆ ಸಿದ್ಧಪಡಿಸಲಾಯಿತು ಎಂದು ಆಕೆ ಹೇಳಿಕೊಂಡಿದ್ದಾಳೆ. ಮುಂದೇನಾಯಿತು, ಗುರಿ ಈಡೇರಿತೇ ಎಂಬುದು ತಿಳಿದಿಲ್ಲ.