ಕೆಲವು ದಿನಗಳ ಹಿಂದೆ ಒಣ ಎಲೆಗಳು, ಪೆನ್ಸಿಲ್ ಮತ್ತು ಚೂಯಿಂಗ್ ಗಮ್ ಬಳಸಿ ವ್ಯಕ್ತಿಯೊಬ್ಬರು ಬೆಂಕಿ ಹೊತ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಅಂಥದ್ದೇ ಇನ್ನೊಂದು ವಿಡಿಯೋ ಇದೀಗ ವೈರಲ್ ಆಗಿದೆ. ಇದರಲ್ಲಿ ಸುತ್ತಿಗೆ ಮತ್ತು ಕಬ್ಬಿಣದ ತುಂಡನ್ನು ಬಳಸಿ ಬೆಂಕಿಯನ್ನು ಹೇಗೆ ಹೊತ್ತಿಸಬಹುದು ಎಂಬುದನ್ನು ವ್ಯಕ್ತಿಯೊಬ್ಬರು ತೋರಿಸಿಕೊಟ್ಟಿದ್ದಾರೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಮೊದಲು ಮರದ ತುಂಡನ್ನು ಪುಡಿಮಾಡುವುದನ್ನು ನೋಡಬಹುದು. ನಂತರ ಅವರು ಲೋಹದಿಂದ ಮಾಡಿದ ಗಟ್ಟಿಮುಟ್ಟಾದ ಟೇಬಲ್ ಮೇಲೆ ಕಾಗದದ ತುಂಡನ್ನು ಇಡುತ್ತಾರೆ. ನಂತರ ಅವರು ಸುತ್ತಿಗೆ ಮತ್ತು ಲೋಹದ ರಾಡ್ ಬಳಸಿ ಸುತ್ತಿಗೆಯಿಂದ ಹೊಡೆಯಲು ಪ್ರಾರಂಭಿಸುತ್ತಾರೆ. ಪ್ರತಿ ಹೊಡೆತಕ್ಕೂ ರಾಡ್ ತಿರುಗಿಸುತ್ತಾರೆ.
ಕೆಲವು ಹೊಡೆತಗಳ ನಂತರ, ರಾಡ್ ಅನ್ನು ಕಾಗದದ ತುಂಡಿಗೆ ಮುಟ್ಟಿಸುತ್ತಾರೆ. ಈ ಸಂದರ್ಭದಲ್ಲಿ ಬೆಂಕಿ ಹೊತ್ತುಕೊಳ್ಳುವುದನ್ನು ನೋಡಬಹುದು. ನಂತರ ಅವರು ಮರದ ಪುಡಿಮಾಡಿದ ತುಂಡುಗಳ ಮೇಲೆ ಕಾಗದವನ್ನು ಇಡುತ್ತಾನೆ. ಅವುಗಳಿಗೂ ಆಗ ಬೆಂಕಿ ಹಿಡಿಯುವ ಅದ್ಭುತ ವಿಡಿಯೋದಲ್ಲಿ ಸೆರೆಯಾಗಿದೆ. ಲೋಹದ ರಾಡ್ ಅನ್ನು ಸುತ್ತಿಗೆಯಿಂದ ಹೊಡೆಯುವ ಮೂಲಕ ಶಾಖವನ್ನು ಉತ್ಪಾದಿಸಲಾಗುತ್ತದೆ ಎಂದು ಅವರು ಇದನ್ನು ವಿವರಿಸಿದ್ದಾರೆ.