ಇಂಡೋನೇಷ್ಯಾದ ದಕ್ಷಿಣ ಸುಮಾತ್ರದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಸುಮಾತ್ರಾದ ಪಶ್ಚಿಮ ಕರಾವಳಿಯ ಆಸ್ಟ್ರೇಲಿಯಾ ಭಾಗದಿಂದ ಬೇರ್ಪಡುವ ಸುಂದ ಮೆಗಾಥ್ರಸ್ಟ್ ಅಥವಾ ಗ್ರೇಟ್ ಸುಮಾತ್ರನ್ ಫಾಲ್ಟ್ ಉದ್ದಕ್ಕೂ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರವನ್ನು(EMSC) ಉಲ್ಲೇಖಿಸಿ ಸ್ಪುಟ್ನಿಕ್ ವರದಿ ಮಾಡಿದೆ.
ಇದು ಹಿಂದೂ ಮಹಾಸಾಗರದ ಮೆಂಟವಾಯಿ ದ್ವೀಪಗಳ ಸಮೀಪದಲ್ಲಿರುವ ಸುಂಗೈ ಪೆನುಹ್ ನಗರದ ನೈರುತ್ಯಕ್ಕೆ 191 ಕಿಲೋಮೀಟರುಗಳಷ್ಟು ದೂರದಲ್ಲಿ 40 ಕಿಲೋಮೀಟರ್ ಆಳದಲ್ಲಿದೆ ಎಂದು ವರದಿ ಮಾಡಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಯಾವುದೇ ಸಾವು, ನೋವಿನ ವರದಿಯಾಗಿಲ್ಲ.