ಕೊಚ್ಚಿ: ಆಟೋ ಚಾಲಕರೊಬ್ಬರಿಗೆ 12 ಕೋಟಿ ರೂಪಾಯಿ ಬಹುಮಾನ ಬಂದಿದೆ. ಕೇರಳದ ಎರ್ನಾಕುಲಂ ಜಿಲ್ಲೆಯ ಮರಾಡ ಗ್ರಾಮದ ನಿವಾಸಿ ಜಯಪಾಲನ್ ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಖರೀದಿಸಿದ್ದ ಲಾಟರಿ ಟಿಕೆಟ್ ಗೆ 12 ಕೋಟಿ ರೂಪಾಯಿ ಬಹುಮಾನ ಬಂದಿದೆ.
ಕೇರಳ ಸರ್ಕಾರದ ಓಣಂ ಲಾಟರಿ ಟಿಕೆಟ್ ಅನ್ನು ಜಯಪಾಲನ್ ಖರೀದಿಸಿದ್ದರು. ಅವರಿಗೆ ಬಹುಮಾನ ನಿರೀಕ್ಷೆ ಇರಲಿಲ್ಲ. ಅದೃಷ್ಟವೆನ್ನುವಂತೆ ಬಂಪರ್ ಬಹುಮಾನ ಬಂದಿದೆ. ಆದರೆ ಅವರಿಗೆ ಗೊತ್ತೇ ಇರಲಿಲ್ಲ. ಲಾಟರಿ ಡ್ರಾ ಬಳಿಕ ಬಹುಮಾನ ಬಂದ ನಂಬರ್ ಗಳ ಘೋಷಣೆ ಮಾಡಲಾಗಿದ್ದು, ಜಯಪಾಲನ್ ಗಮನಿಸಿರಲಿಲ್ಲ.
ರಾತ್ರಿ ಆಟೋ ಚಾಲನೆ ಕೆಲಸ ಮುಗಿಸಿ ಬೆಳಗ್ಗೆ ಮನೆಯಲ್ಲಿದ್ದ ವೇಳೆಯಲ್ಲಿ ಮಾಧ್ಯಮಗಳಲ್ಲಿ ಬಹುಮಾನದ ಲಾಟರಿ ನಂಬರ್ ಪ್ರಸಾರವಾದಾಗ ಗಮನಿಸಿದ್ದಾರೆ. 12 ಕೋಟಿ ರೂಪಾಯಿ ಲಾಟರಿ ಬಂದಿದೆ. ಪ್ರತಿಬಾರಿ ನಾನು ಲಾಟರಿ ಖರೀದಿಸುತ್ತಿದ್ದೆ. ಈ ಬಾರಿ ಅದೃಷ್ಟ ಸಿಕ್ಕಿದೆ. ಡೀಲರ್ ಕಮಿಷನ್, ತೆರಿಗೆ ಕಡಿತವಾಗಿ 7.39 ಕೋಟಿ ರೂಪಾಯಿ ಸಿಗಲಿದ್ದು, ಸಾಲ ತೀರಿಸಿ ಮನೆ ಕಟ್ಟಿಕೊಳ್ಳುವುದಾಗಿ ಜಯಪಾಲನ್ ಹೇಳಿದ್ದಾರೆ.