ನವದೆಹಲಿ: ವಯಸ್ಕ ಮಹಿಳೆ ಎಲ್ಲಿ ಯಾರೊಂದಿಗೆ ಬೇಕಾದರೂ ವಾಸಿಸಬಹುದು. ಮಹಿಳೆ ಬಯಸಿದ್ದಲ್ಲಿ ತಾನು ಇಷ್ಟಪಟ್ಟವರೊಂದಿಗೆ ವಾಸಿಸಲು ಸ್ವತಂತ್ರರಾಗಿರುತ್ತಾಳೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಅಂತಹ ಯುವತಿಯರಿಗೆ ಪೋಷಕರು ಯಾವುದೇ ರೀತಿಯ ಬೆದರಿಕೆ ಹಾಕುವಂತಿಲ್ಲ ಎಂದು ತಿಳಿಸಿದೆ. ದೆಹಲಿಯ ಯುವತಿ ನಾಪತ್ತೆಯಾಗಿದ್ದು, ಆಕೆಯನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಪೋಷಕರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ದೂರು ನೀಡಿದ್ದರು. ಯುವತಿಯನ್ನು ಪತ್ತೆ ಮಾಡಿದ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಎದುರು ಹಾಜರುಪಡಿಸಿದ್ದರು.
ದೆಹಲಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆದಿದ್ದು, ಯುವತಿಗೆ 20 ವರ್ಷವಾಗಿದೆ. ಆಕೆ ತನ್ನ ಇಷ್ಟದ ಪ್ರಕಾರ ಯುವಕನೊಂದಿಗೆ ತೆರಳಿ ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ. ವಯಸ್ಕ ಮಹಿಳೆ ಎಲ್ಲಿ ಯಾರೊಂದಿಗೆ ಬೇಕಾದರೂ ವಾಸಿಸಬಹುದು, ಆಕೆ ಸ್ವತಂತ್ರರಾಗಿದ್ದಾಳೆ. ಪೋಷಕರು ಆಕೆಗೆ ಬೆದರಿಕೆ ಹಾಕಬಾರದು ಎಂದು ತಿಳಿಸಲಾಗಿದೆ.