alex Certify ಫುಟ್ಬಾಲ್ ಫೀವರ್‌ನಲ್ಲಿ ಬೆರಗುಗೊಳಿಸಿದ ಅಮುಲ್‌ನ “ಟೇಸ್ಟಿ” ಕ್ಲಿಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಟ್ಬಾಲ್ ಫೀವರ್‌ನಲ್ಲಿ ಬೆರಗುಗೊಳಿಸಿದ ಅಮುಲ್‌ನ “ಟೇಸ್ಟಿ” ಕ್ಲಿಪ್

ಫಿಫಾ ಫುಟ್ಬಾಲ್ ವರ್ಲ್ಡ್ ಕಪ್ ಫೀವರ್ ಶುರುವಾಗಿದೆ. ಫುಟ್ಬಾಲ್ ಕ್ರೇಜ್ ವಿಪರೀತ ಹೆಚ್ಚಾಗಿದೆ. ಈ ನಡುವೆ ಕ್ರಿಯಾಶೀಲತೆಗೂ ಹೆಸರಾಗಿರುವ ಅಮುಲ್ ತನ್ನ ಚಾಕಚಕ್ಯತೆ ಮೆರೆದು ನೆಟ್ಟಿಗರನ್ನು ಬೆರಗುಗೊಳಿಸಿದೆ.

ಪಂದ್ಯವನ್ನು ಕಣ್ತುಂ ಬಿಕೊಳ್ಳಲು ಜಗತ್ತಿನಾದ್ಯಂತ ಟಿವಿಗಳು ಆನ್ ಆಗಿವೆ, ಸ್ನ್ಯಾಕ್ಸ್ ಕೂಡ ಸಿದ್ಧವಾಗಿವೆ, ಸ್ಪೋರ್ಟ್ಸ್ ಬಾರ್ ತುಂಬಿವೆ. ವಿಶ್ವ ಕಪ್ 2022 ಪ್ರಾರಂಭವಾಗುತ್ತಿದ್ದಂತೆ ಕತಾರ್‌ನ ಕ್ರೀಡಾಂಗಣವು ಬಹಳ ಉತ್ಸಾಹದಿಂದ ತುಂಬಿದ್ದು, ಸಂಭ್ರಮ ಮನೆಮಾಡಿದೆ.

ಫುಟ್ಬಾಲ್ ಸೀಸನ್ ಆರಂಭವಾಗುತ್ತಿದ್ದಂತೆ ಪ್ರಪಂಚದಾದ್ಯಂತ ಜನರು ಉತ್ಸಾಹದಲ್ಲಿ ಮುಳುಗಿದ್ದಾರೆ. ಇದೇ ಸಂದರ್ಭದಲ್ಲಿ ಭಾರತೀಯ ಡೈರಿ ಕ್ಷೇತ್ರದ ಅಮುಲ್ ಕೂಡ ತನ್ನ ಆಸಕ್ತಿಯಾಗಿ ಮೆಮೊರಿ ಲೇನ್‌ನಲ್ಲಿ ಪ್ರಯಾಣಿಸುವ ಕ್ಲಿಪ್ ಅನ್ನು ಹಂಚಿಕೊಂಡಿದೆ.

ಇದುವರೆಗಿನ ಫಿಫಾ ವಿಶ್ವ ಕಪ್‌ಗಳ ಬಗ್ಗೆ ಎಲ್ಲಾ ಹಿಂದಿನ ವಿಷಯಗಳನ್ನು ಪ್ರಸ್ತಾಪಿಸಿದ್ದು, ರಿಕಿ ಮಾರ್ಟಿನ್ ಹಾಡನ್ನು ಅದಕ್ಕೆ ಸೇರಿಸಿ ಅಭಿಮಾನಿಗಳಿಗೆ ಸಮರ್ಪಿಸಿದೆ.

ದಿಗ್ಗಜ ಆಟಗಾರರನ್ನು ಸ್ಮರಿಸಿದ್ದು, ಕ್ಯಾಚಿ ಶಿರ್ಷಿಕೆಗಳನ್ನು ನೀಡಿರುವುದು ಗಮನ ಸೆಳೆಯುತ್ತದೆ.
ಮರಡೋನಾ ತೋ ಐಸಾ ಹೊನಾ, ಬಟರ್ ಹೋನಾ ತೋ ಅಮುಲ್ ಹೋನಾ… ರೊನಾಲ್ಡೋ, ರಿವಾಲ್ಡೋ, ಅಮುಲ್ ದೋ… ಎಂಬ ಸಾಲುಗಳು ಪಂಚಿಂಗ್ ಆಗಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...