RRR ಸಿನೆಮಾದ ನಾಟು……ನಾಟು ಹಾಡಿಗೆ 2023ರ ಸಾಲಿನ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಘೋಷಿಸ್ತಿದ್ದ ಹಾಗೆ ಕೇವಲ ಚಿತ್ರತಂಡ ಮಾತ್ರ ಕುಣಿದು ಕುಪ್ಪಳಿಸಿರಲಿಲ್ಲ. ಬದಲಿಗೆ ಇಡೀ ದೇಶವೇ ದೊಡ್ಡ ಹಬ್ಬದಂತೆ ಅದ್ದೂರಿಯಾಗಿ ಸಂಭ್ರಮಾಚರಣೆ ಮಾಡಿತ್ತು.
RRR ಸಿನೆಮಾ ವಿಶ್ವದ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಗೆ ಪಾತ್ರವಾಗಿದೆ ಅಂದ್ರೆ ಯಾರಿಗೆ ಖುಷಿಯಾಗೋಲ್ಲ ಹೇಳಿ. ಅತ್ತ ಪ್ರಶಸ್ತಿ ಘೋಷಿಸ್ತಿದ್ದ ಹಾಗೆಯೇ ಚಿತ್ರತಂಡಕ್ಕೆ ಅಭಿಮಾನಿಗಳು ಶುಭಹಾರೈಕೆಗಳ ಸುರಿಮಗಳೆಯನ್ನೇ ಸುರಿಸಿದ್ದರು. ಇನ್ನೂ ಭಾರತದ ಇಂತಹ ಸಾಧನೆಗಳನ್ನ ತಮ್ಮದೇ ಆಗಿರುವ ಶೈಲಿಯಲ್ಲಿ ಶುಭಹಾರೈಸುವುದರಲ್ಲಿ ಅಮೂಲ್ ಇಂಡಿಯಾ ಎತ್ತಿದ ಕೈ. ಈಗ RRR ಸಿನೆಮಾಗೂ ಕೂಡಾ ವಿಭಿನ್ನ ರೀತಿಯಲ್ಲಿ ಶುಭಹಾರೈಸಿದೆ.
ಹಾಲಿನಿಂದ ತಯಾರಿಸಲಾಗೋ ಉತ್ಪನ್ನಗಳಿಗೆ ಪ್ರಸಿದ್ಧವಾಗಿರೋ ಅಮೂಲ್ ಇಂಡಿಯಾ, RRR ಸಿನೆಮಾ ತಂಡಕ್ಕೆ ಶುಭ ಹಾರೈಸಿರುವ ರೀತಿ ಹೇಗಿದೆ ನೋಡಿ. ಇಲ್ಲಿ ನಾಟು ನಾಟು ಸ್ಟೈಲ್ನಲ್ಲಿ ಡಾನ್ಸ್ ಮಾಡುವ ಇಬ್ಬರು ಕೈಯಲ್ಲಿ ಬೆಣ್ಣೆ ಹಚ್ಚಿಕೊಂಡಿದ್ದ ಬ್ರೆಡ್ ಹಿಡಿದುಕೊಂಡಿದ್ದಾರೆ. ಇವರಿಬ್ಬರ ಮಧ್ಯದಲ್ಲಿ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಈ ಗ್ಲೋಬಲ್ ಅವಾರ್ಡ್ ಹಿಡಿದೆತ್ತಿಕೊಂಡು ಸಂಭ್ರಮಿಸುತ್ತಿದ್ದಾರೆ. ಅಷಕ್ಕೂಈ ಅಕ್ಕಪಕ್ಕದಲ್ಲಿರುವ ಡೂಡಲ್ ರೂಪದವರು ಯಾರು ಅಂತ ಗೊತ್ತಾಗಿರಬೇಕಲ್ವಾ. ಓರ್ವ ನಟ ರಾಮಚರಣ್, ಇನ್ನೊರ್ವ ನಟ ಜ್ಯೂನಿಯರ್ NTR.
ಹೀಗೆ ವಿಶೇಷ ರೀತಿಯಲ್ಲಿ ಶುಭ ಹಾರೈಸಿರುವ ಈ ಚಿತ್ರವನ್ನ ಅಮೂಲ್ ಇಂಡಿಯಾ ತಮ್ಮ ವೆಬ್‌ಸೈಟ್‌ನಲ್ಲಿ ಶೇರ್ ಮಾಡ್ಕೊಂಡಿದೆ. ಇದನ್ನ ಈಗಾಗಲೇ 3 ಸಾವಿರಕ್ಕೂ ಹೆಚ್ಚು ಜನರ ನೋಡಿ ಇಷ್ಟಪಟ್ಟಿದ್ದಾರೆ.
ಅಮೂಲ್ ಇಂಡಿಯಾ, ಈ ರೀತಿ ಸಾಧನೆ ಮಾಡಿದವರ ಕುರಿತು, ಇಲ್ಲಾ ವಿವಾದಾತ್ಮಕ ವಿಷಯಗಳ ಕುರಿತು ಡೂಡಲ್ ರೂಪ ಕೊಡುವುದರಲ್ಲಿ ಎಕ್ಸ್‌ಪರ್ಟ್ ಆಗಿದೆ. ಈ ಬಾರಿ RRR ಚಿತ್ರತಂಡ ನಾಟು-ನಾಟು ಹಾಡಿಗೆ ಗೋಲ್ಡನ್ ಗ್ಲೋಬಲ್ ಅವಾರ್ಡ್ ಈ ರೀತಿಯಾಗಿ ಡೂಡಲ್ ರೂಪ ಕೊಟ್ಟು, ಜನರ ಮನಸ್ಸನ್ನ ಗೆದ್ದಿದೆ. ಇನ್ನೂ RRR ಅಂದರೆ Really Remarkable Reward ( ನಿಜಕ್ಕೂ ಅದ್ಭುತವಾದ ಪ್ರತಿಫಲ) ಎಂದು ತಲೆಬರಹದಲ್ಲಿ ಬರೆದಿದೆ.