ನವದೆಹಲಿ: ನೀವು ಅಮುಲ್ ಫ್ರಾಂಚೈಸ್ ಹೊಂದಲು ಯೋಚಿಸುತ್ತಿದ್ದರೆ, ಮಾಲೀಕರು ಮತ್ತು ಸಣ್ಣ ಉದ್ಯಮಗಳ ಅನುಕೂಲಕ್ಕಾಗಿ ಕಂಪೆನಿಯು ತನ್ನ ವೆಬ್‌ಸೈಟ್‌ನಲ್ಲಿ ಈ ಕುರಿತು ಚಾಲನೆ ನೀಡಿದೆ ಎಂಬ ಸಂದೇಶಗಳು ಹರಿದಾಡುತ್ತಿದ್ದು, ಇವುಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಕಂಪೆನಿ ಹೇಳಿದೆ. ನಕಲಿ ವೆಬ್ಸೈಟ್ಗಳು ಈ ರೀತಿಯ ಸಂದೇಶಗಳನ್ನು ನೀಡುತ್ತಿದ್ದು, ಮೋಸ ಹೋಗಬೇಡಿ ಎಂದು ಕಂಪೆನಿ ಹೇಳಿದೆ.
ಒಂದು ವೇಳೆ ಅಮುಲ್ ಪಾರ್ಲರ್ ತೆರೆಯಲು, ಅಮುಲ್ ವಿತರಕರಾಗಲು ಅಥವಾ ಉದ್ಯೋಗದ ವಿಚಾರಣೆಗಾಗಿ, ಅಮುಲ್ ಅಧಿಕೃತ ವೆಬ್‌ಸೈಟ್ amul.com ಗೆ ಮಾತ್ರ ಭೇಟಿ ನೀಡಬೇಕು ಅಥವಾ (022) 6852666 ಗೆ ಕರೆ ಮಾಡಬೇಕು ಎಂದು ಅಮುಲ್ ಎಚ್ಚರಿಸಿದೆ.
“ಅಮುಲ್ ಪಾರ್ಲರ್‌ಗಳು, ಅಮುಲ್ ಸ್ಕೂಪಿಂಗ್ ಪಾರ್ಲಸ್‌ನ ಫ್ರಾಂಚೈಸಿಗಳನ್ನು ಸ್ಥಾಪಿಸಲು ಅಥವಾ ವಿತರಕರಾಗಲು ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳು GCMMF (AMUL) ಲಿಮಿಟೆಡ್‌ನಿಂದ ಮಾತ್ರ ಕಡ್ಡಾಯವಾಗಿದೆ ಎಂದು ಗ್ರಾಹಕರು ಮತ್ತು ನಿರೀಕ್ಷಿತ ಪಾಲುದಾರರಿಗೆ ತಿಳಿಸಲು ನಾವು ಬಯಸುತ್ತೇವೆ. ಯಾವುದೇ ಇತರ ವೆಬ್‌ಸೈಟ್/ವೈಯಕ್ತಿಕ/ಎಂಟಿಟ್/ಸಂಸ್ಥೆ ನಮ್ಮ ಸಂಸ್ಥೆ ಮತ್ತು ಬ್ರ್ಯಾಂಡ್ ಅನ್ನು ಪ್ರತಿನಿಧಿಸುವುದು ಅಥವಾ ಸೋಗು ಹಾಕುವುದು ವ್ಯಕ್ತಿಗಳನ್ನು ವಂಚಿಸುವ ಉದ್ದೇಶದಿಂದ ಮತ್ತು ನಮ್ಮ ಬ್ರ್ಯಾಂಡ್‌ಗೆ ಹಾನಿ ಮಾಡುವ ಉದ್ದೇಶದಿಂದ ಮಾಡುತ್ತಿದೆ” ಎಂದು ಅಮುಲ್ ತನ್ನ ವೆಬ್‌ಸೈಟ್‌ನಲ್ಲಿ ಬಳಕೆದಾರರನ್ನು ಎಚ್ಚರಿಸಿದೆ.