1997ರಲ್ಲಿ ತೆರೆಕಂಡ ಅಮೃತವರ್ಷಿಣಿ ಕನ್ನಡ ಸಿನಿ ಇಂಡಸ್ಟ್ರಿಯ ಎವರ್ಗ್ರೀನ್ ಚಿತ್ರ. ನಿರ್ದೇಶಕ ದಿನೇಶ್ ಬಾಬು, ನಟ ರಮೇಶ್ ಅರವಿಂದ್ ವೃತ್ತಿಜೀವನಕ್ಕೆ ಅತಿದೊಡ್ಡ ಬ್ರೇಕ್ ಕೊಟ್ಟ ಅಮೃತವರ್ಷಿಣಿ ಬಿಡುಗಡೆಯಾಗಿ ಶುಕ್ರವಾರಕ್ಕೆ 25 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಅರವಿಂದ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.
ದಿನೇಶ್ ಬಾಬು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದರು. ಭಾರತಿ ದೇವಿ ಅವರ ಚಿನ್ನಿ ಚಿತ್ರ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗಿತ್ತು. ಚಿತ್ರಕ್ಕೆ ದೇವಾ ಅವರು ಹಿನ್ನೆಲೆ ಸಂಗೀತ ಸಂಯೋಜಿಸಿದ್ದು, ದಿನೇಶ್ ಬಾಬು ಛಾಯಾಗ್ರಹಣವಿತ್ತು. ‘ಅಮೃತವರ್ಷಿಣಿ’ ಚಿತ್ರದಲ್ಲಿ ರಮೇಶ್ ಅರವಿಂದ್ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಂಡಿದ್ದು, ಈ ಪಾತ್ರ ಅವರಿಗೆ ಹೆಚ್ಚು ಖ್ಯಾತಿಯನ್ನು ತಂದುಕೊಟ್ಟಿತ್ತು. ಈ ಚಿತ್ರವು ರಾಜ್ಯ ಪ್ರಶಸ್ತಿ ಹಾಗೂ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ‘ಅಮೃತ ವರ್ಷಿಣಿ’ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗೆ ಡಬ್ ಆಗಿ ಸೂಪರ್ ಹಿಟ್ ಆಗಿದೆ.
ನಿಮ್ಮ ಮನೆಯ ʼಅಡುಗೆ ಕೋಣೆʼ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ ಗೊತ್ತಾ….?
‘ಅಮೃತ ವರ್ಷಿಣಿ’ ಚಿತ್ರಕ್ಕೆ 25 ವರ್ಷ ತುಂಬಿರುವ ಸಂತಸದಲ್ಲಿ ರಮೇಶ್ ಅರವಿಂದ್, ‘ಅಮೃತವರ್ಷಿಣಿಗೆ 25 ವರ್ಷ ! ಜಯಶ್ರೀ ದೇವಿ, ದಿನೇಶ್ ಬಾಬು, ಸುಹಾಸಿನಿ, ಶರತ್ ಬಾಬು, ನಿವೇದಿತಾ, ದೇವಾ, ಕಲ್ಯಾಣ್, ಚಿತ್ರಾ ಮತ್ತು ನಮ್ಮ ಪ್ರೀತಿಯ ಎಸ್‌ಪಿಬಿ ಸರ್ ಅವರಿಗೆ ನಾನು ಋಣಿ. ಇಷ್ಟು ವರ್ಷ ನನ್ನ ಮೇಲೆ ಪ್ರೀತಿ ತೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದು ಹೇಳಿ ಬ್ಲ್ಯಾಕ್ ಅಂಡ್ ವೈಟ್ ಫೋಟೋ ಮೂಲಕ ತಮ್ಮ ಸಂತೋಷವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
1997ರಲ್ಲಿ ಬಿಡುಗಡೆಯಾದ ‘ಅಮೃತವರ್ಷಿಣಿ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಮೇಶ್ ಅರವಿಂದ್, ಸುಹಾಸಿನಿ, ಶರತ್ ಬಾಬು, ನಿವೇದಿತಾ ಜೈನ್ ಅಭಿನಯಿಸಿದ್ದ ಈ ಚಿತ್ರ ಮ್ಯೂಸಿಕಲ್ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.